ಮುಂಬೈ/ಲಂಡನ್: ನಟಿ ನತಾಶಾ (Natasa) ಜೊತೆಗಿನ ಡಿವೋರ್ಸ್ (Divorce) ಬೆನ್ನಲ್ಲೇ ಟೀಂ ಇಂಡಿಯಾ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ (Hardik Pandya) ಮತ್ತೆ ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ನತಾಶಾಗೆ ಗುಡ್ ಬೈ ಹೇಳಿದ್ಮೇಲೆ ಬ್ರಿಟಿಷ್ ಗಾಯಕಿ ಜಾಸ್ಮಿನ್ ವಾಲಿಯಾ ಅವರೊಂದಿಗೆ ಡೇಟಿಂಗ್ನಲ್ಲಿದ್ದಾರೆ ಎಂಬ ವದಂತಿ ಹಬ್ಬಿಕೊಂಡಿದೆ.
Duleep Trophy: ದುಲೀಪ್ ಟ್ರೋಫಿ ಎಂದರೇನು ? ಯಾವಾಗ ಶುರುವಾಯಿತು? ಉದ್ದೇಶವೇನು?
ಇತ್ತೀಚೆಗಷ್ಟೇ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ವಿವಾಹ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಂಡ್ಯ ಬಾಲಿವುಡ್ ನಟಿ ಅನನ್ಯಾ ಪಾಂಡೆ ಅವರೊಂದಿಗೆ ಕುಣಿದು ಕುಪ್ಪಳಿಸಿದ್ದರು. ಈ ಬೆನ್ನಲ್ಲೇ ಅನನ್ಯ ಪಾಂಡೆ ಅವರೊಂದಿಗೆ ಹಾರ್ದಿಕ್ ಲವ್ವಿ ಡವ್ವಿ ಶುರುವಾಗಿದೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿತ್ತು. ಇದೀಗ ಪಾಂಡ್ಯ ಬ್ರಿಟಿಷ್ ಗಾಯಕಿ ಜಾಸ್ಮಿನ್ ಜೊತೆಗೆ ಡೇಟಿಂಗ್ನಲ್ಲಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ. ಇವರಿಬ್ಬರು ಗ್ರೀಸ್ನಲ್ಲಿ ವಿಹಾರ ಮಾಡುತ್ತಿದ್ದಾರೆ ಹೇಳಲಾಗುತ್ತಿದೆ.
ಜಾಸ್ಮಿನ್ ಇಂಗ್ಲೆಂಡಿನ ಎಸೆಕ್ಸ್ನಲ್ಲಿ ಜನಿಸಿದ್ರೂ ಈಕೆಯ ಪೋಷಕರು ಭಾರತೀಯ ಮೂಲದವರೇ ಆಗಿದ್ದಾರೆ. ಜಾಸ್ಮಿನ್ ಗಾಯಕಿ ಆಗೋದಕ್ಕೂ ಮುನ್ನ ʻದಿ ಓನ್ಲಿ ವೇ ಈಸ್ ಎಸೆಕ್ಸ್ʼ ಎಂಬ ಬ್ರಿಟಿಷ್ ರಿಯಾಲಿಟಿ ಶೋನಲ್ಲಿ ತೊಡಗಿಸಿಕೊಂಡು, 2010ರ ವೇಳೆಗೆಲ್ಲಾ ಜನಪ್ರಿಯತೆ ಗಳಿಸಿದ್ದರು. 2012ರ ವೇಳೆಗೆ ಈ ಶೋನಲ್ಲಿ ಪೂರ್ಣಪಾತ್ರಧಾರಿಯಾಗಿ ಸ್ಥಾನ ಗಿಟ್ಟಿಸಿಕೊಂಡರು. ಈ ಮೂಲಕ ಜನಪ್ರಿಯ ರಿಯಾಲಿಟಿ ಶೋನಲ್ಲಿ ತಮ್ಮ ಛಾಪು ಮೂಡಿಸಿದ್ದರು. ಇದು ಅವರು ಮನರಂಜನಾ ಉದ್ಯಮದಲ್ಲಿ ಮುಂದುವರಿಯಲು ಸಹಾಯ ಮಾಡಿತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.