ಬಾಲಿವುಡ್ ಬೆಡಗಿ ನತಾಶಾ (Actress Natasa) ಇದೀಗ ವೈಯಕ್ತಿಕ ಬದುಕಿನ ವಿಚಾರವಾಗಿ ಸುದ್ದಿಯಾಗ್ತಿದ್ದಾರೆ. ಹಾರ್ದಿಕ್ ಪಾಂಡ್ಯಾ (Hardik Pandya) ಜೊತೆಗಿನ ಡಿವೋರ್ಸ್ ಖಚಿತಪಡಿಸಿದ ಬಳಿಕ ನಟಿ ಸೋಷಿಯಲ್ ಮೀಡಿಯಾದಲ್ಲಿ ಮತ್ತಷ್ಟು ಆ್ಯಕ್ಟೀವ್ ಆಗಿದ್ದಾರೆ. ಇದೀಗ ಮಾಜಿ ಪತ್ನಿ ನತಾಶಾಗೆ ಹಾರ್ದಿಕ್ ಮತ್ತೆ ಪ್ರೀತಿ ತೋರಿದ್ದಾರೆ.
ಸದ್ಯ ತವರು ಮನೆ ಸೆರ್ಬಿಯಾದಲ್ಲಿ ಮಗನ ಜೊತೆ ನಟಿ ನತಾಶಾ ಕಾಲ ಕಳೆಯುತ್ತಿದ್ದಾರೆ. ಮೃಗಾಲಯಕ್ಕೆ ಹೋಗಿರುವ ಕೆಲವು ಫೋಟೋಗಳನ್ನು ನಟಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮಾಜಿ ಪತ್ನಿಯ ಪೋಸ್ಟ್ಗೆ ಹಾರ್ದಿಕ್, ಲೈಕ್ ಮತ್ತು ಹಾರ್ಟ್ ಸಿಂಬಲ್ ಕೊಟ್ಟು ಕಾಮೆಂಟ್ ಮಾಡಿದ್ದಾರೆ
ನತಾಶಾಗೆ ಹಾರ್ದಿಕ್ ಮಾಡಿರುವ ಕಾಮೆಂಟ್ ನೋಡಿ ಮಾಜಿ ಪತ್ನಿ ಮೇಲೆ ಇನ್ನೂ ಪ್ರೀತಿ ಇದೆ ಎಂದೆಲ್ಲಾ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಈ ಜೋಡಿ ಮತ್ತೆ ಒಂದಾಗಲಿ ಎಂದು ಫ್ಯಾನ್ಸ್ ಆಶಿಸುತ್ತಿದ್ದಾರೆ.