ದುನಿಯಾ ವಿಜಯ್ ಅವರು 50ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹೀಗಾಗಿ ತಂದೆ-ತಾಯಿ ಸಮಾಧಿ ಬಳಿ ಬರ್ತ್ಡೇ ಆಚರಿಸಿಕೊಂಡಿದ್ದಾರೆ. ಅಭಿಮಾನಿಗಳು ಅವರಿಗೆ ಸಾಥ್ ನೀಡಿದ್ದಾರೆ. ಕೇಕ್ ಕತ್ತರಿಸಿ ಸಂಭ್ರಮಿಸಲಾಗಿದೆ. ತಂದೆ-ತಾಯಿ ಸಮಾಧಿಗೆ ಹೂವಿನ ಅಲಂಕಾರ ಮಾಡಲಾಗಿದೆ.
ಬೆಂಗಳೂರು ಸಮೀಪ ಇರುವ ಆನೇಕಲ್ ತಾಲೂಕಿನ ಕುಂಬಾರಹಳ್ಳಿಯಲ್ಲಿ ವಿಜಯ್ ತಂದೆ, ತಾಯಿ ಸಮಾಧಿ ಇದೆ. ಬರ್ತ್ಡೇ ಶುಭಾಶಯ ಕೋರಲು ಇಂದು ಅಭಿಮಾನಿಗಳು ತೆರಳಲಿದ್ದಾರೆ. ಹೀಗಾಗಿ, 5,000 ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಕಳೆದ ಒಂದು ವಾರದಿಂದ ಅವರು ಊರಿನಲ್ಲೇ ಉಳಿದುಕೊಂಡಿದ್ದರು. ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳು ಬರುತ್ತಿವೆ.
ದುನಿಯಾ ವಿಜಯ್ ಅವರು ಕಳೆದ ವರ್ಷವೂ ಬರ್ತಡೇನ ತಂದೆ, ತಾಯಿ ಸಮಾಧಿ ಬಳಿಯೇ ಮಾಡಿಕೊಂಡಿದ್ದರು. ಈ ಬಾರಿ ಸಮಾಧಿಯನ್ನು ದೇವಸ್ಥಾನದಂತೆ ನಿರ್ಮಿಸಿದ್ದಾರೆ. ಈ ಮೂಲಕ ತಂದೆ, ತಾಯಿ ಮೇಲಿರುವ ಪ್ರೀತಿಯನ್ನು ಅವರು ಹೊರ ಹಾಕಿದ್ದಾರೆ.
ಇನ್ನೂ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರು ನಟಿಸಿ ನಿರ್ದೇಶಿಸುತ್ತಿರುವ ‘ಭೀಮ’ ಸಿನಿಮಾದ ಟೀಸರ್ ಆನಂದ್ ಆಡಿಯೋ ಮೂಲಕ ರಿಲೀಸ್ ಆಗಿದೆ