ಬೆಂಗಳೂರು: ಕಳೆದ ಕೆಲ ದಿನಗಳಿಂದ ದಿನಬೆಳಗಾದರೆ ಒಂದಲ್ಲ ಒಂದು ವಸ್ತುಗಳ ದರ ಏರಿಕೆಯಾಗುತ್ತಲೇ ಇದೆ. ಅದರಲ್ಲೂ ಅಗತ್ಯ ತರಕಾರಿಗಳಾದ ಈರುಳ್ಳಿ, ಬೆಳ್ಳುಳ್ಳಿ ದರ ಗಗನ ಸಖಿಯಾಗಿದ್ದು, ಈ ಸಾಲಿಗೆ ಟೊಮೆಟೊ ಕೂಡ ಸೇರ್ಪಡೆಯಾಗಿದೆ.
ಕಳೆದ ಕೆಲ ದಿನಗಳಿಂದ ಈರುಳ್ಳಿ, ಬೆಳ್ಳುಳ್ಳಿ ದರ ಕೇಳಿದ್ರೆನೆ ಜನ ಹೆದರುವ ಪರಿಸ್ಥಿತಿ ನಿರ್ಮಾಣ ಆಗಿದೆ. ಈಗಾಗಲೇ ಬೆಳ್ಳುಳ್ಳಿ ಕೆಜಿಗೆ 400 ರೂ. ದಾಟಿದ್ರೆ ಈರುಳ್ಳಿ 100 ರೂ. ಸನಿಹಕ್ಕೆ ಬಂದಿದೆ. ಈ ನಡುವೆ ಟೊಮೆಟೊ ಕೂಡ ಇದೇ ಸಾಲಿಗೆ ಸೇರಿದ್ದು. ಟೊಮೆಟೊ ದರ 100 ರೂ. ದರ ಏರಿಕೆಯಾಗಿದೆ.
ಕಳೆದ ನಾಲ್ಕೈದು ತಿಂಗಳ ಹಿಂದಷ್ಟೇ ಮಳೆ ಅಭಾವ ಮತ್ತು ರೋಗದ ಕಾರಣ ಭಾರೀ ಪ್ರಮಾಣದಲ್ಲಿ ಟೊಮೆಟೊ ಇಳುವರಿ ಕಡಿಮೆಯಾಗಿತ್ತು. ಪರಿಣಾಮ ಟೊಮೆಟೊ ದರ 100 ರೂ. ದಾಟಿತ್ತು. ಆ ಬಳಿಕ ಈಗ ಮತ್ತೆ ಅದೇ ಪರಿಸ್ಥಿತಿ ನಿರ್ಮಾಣ ಆಗಿ ದಿಢೀರ್ ದರ ಏರಿಕೆಯಾಗಿದ್ದು, ಟೊಮೆಟೊ ಕೊಳ್ಳೋಕು ಹಿಂದೂಮುಂದು ನೋಡುವ ಸ್ಥಿತಿ ನಿರ್ಮಾಣ ಆಗಿದೆ. ಈ ಬಾರಿ ಮಳೆ ಪ್ರಮಾಣ ಹೆಚ್ಚಾದ ಕಾರಣ ಇತರೆ ಜಿಲ್ಲೆಗಳಿಂದ ಬೆಂಗಳೂರಿಗೆ (Bengaluru) ಸರಬರಾಜು ಆಗುತ್ತಿದ್ದ ಟೊಮೆಟೊದಲ್ಲಿ ಭಾರೀ ಇಳಿಕೆ ಕಂಡಿದೆ. ಬೆಂಗಳೂರಿನ ಕೆಲ ಭಾಗಗಳಿಂದ ಮಾತ್ರ ಟೊಮೆಟೊ ಬರುತ್ತಿದ್ದು, ಸಂಪೂರ್ಣ ಪೂರೈಕೆ ಆಗುತ್ತಿಲ್ಲ. ಹೀಗಾಗಿ ದರ ಏರಿಕೆ ಆಗುತ್ತಿದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ.