ದೊಡ್ಡಬಳ್ಳಾಪುರ: ತಾಲೂಕಿನ ತಿರುಮಗೊಂಡನಹಳ್ಳಿ ಗ್ರಾಮದಲ್ಲಿರುವ ಶ್ರೀ ದಿನ್ನೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿ ಪ್ರಯುಕ್ತ ವಿಶೇಷ ಪೂಜೆ ಕಾರ್ಯಕ್ರಮ ನಡೆಯಿತು.
ಪೂಜಾ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಶ್ರೀ ಸ್ವಾಮಿ ಯವರಿಗೆ ಸುಪ್ರಭಾತ ಸೇವೆ, ವಿಶೇಷ ಫಲ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಅಲಂಕಾರ ಹಾಗೂ ಗ್ರಾಮಸ್ಥರಿಂದ ಪೂಜೆ ಹಾಗೂ ಅನ್ನ ಸಂತರ್ಪಣೆ ನಡೆಯಿತು.ಸಂಜೆ ವೇಳೆಗೆ 25 ರಿಂದ 30 ಉತ್ಸವ ಮೂರ್ತಿಗಳನ್ನು ಮೆರವಣಿಗೆ ಮಾಡಲಾಯಿತು..
ದೇವಾಲಯದ ಪ್ರಧಾನ ಅರ್ಚಕರಾದ ವಾಸುದೇವಾಚಾರ್ ಮಾತನಾಡಿ ಉದ್ಬವ ದಿನ್ನೆ ಆಂಜಿನೇಯ ಸ್ವಾಮಿಗೆ 800 ವರ್ಷದ ಇತಿಹಾಸವಿದೆ.ದೇವಾಲಯಕ್ಕೆ ಬಂದು ಭಕ್ತಾಧಿಗಳು ಅರಕೆ ಹೊತ್ತರೆ ಆಂಜನೇಯ ಸ್ವಾಮಿ ಈಡೇರಿಸುತ್ತಾನೆ.ಸಂತಾನ ಇಲ್ಲದವರು ದೇವರಲ್ಲಿ ಪ್ರಾರ್ಥನೆ ಮಾಡಿದರೆ ಸಂತಾನ ಫಲಗಳು ಪ್ರಾಪ್ತಿಯಾಗುತ್ತೆ.ಮೋಕ್ಷ ಫಲಗಳು ಸಿಗುತ್ತೆ ಎಂದರು.ಪ್ರತಿ ವರ್ಷ ಹನುಮ ಜಯಂತಿ ಪ್ರಯುಕ್ತ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಆಂಧ್ರ,ತಮಿಳುನಾಡು,ಕೇರಳ,ಹಾಸನ,ಚನ್ನರಾಯಪಟ್ಟಣ, ಕಾಳಹಸ್ತಿ ಇಂದ ಭಕ್ತರು ಬಂದು ದೇವರ ದರ್ಶನ ಪಡೆಯುತ್ತಾರೆ.ಹನುಮ ಜಯಂತಿ ಪ್ರಯುಕ್ತ 20 ರಿಂದ 25 ಉತ್ಸವ ಮೂರ್ತಿಗಳನ್ನು ಮೆರವಣಿಗೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಇದೆ ವೇಳೆ ವಕೀಲರು, ಬಿಜೆಪಿ ಮುಖಂಡ ಪ್ರತಾಪ್ ಮಾತನಾಡಿ ಪುರಾತನ ಕಾಲದ ದೇವಾಲಯ ಇದಾಗಿದ್ದು ಪ್ರತಿ ವರ್ಷ ಸುತ್ತ ಮುತ್ತಲಿನ ಗ್ರಾಮಸ್ಥರು ಸೇರಿ ಹನುಮ ಜಯಂತಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ಮಾಡಿ ಬರುವ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ಮಾಡುತ್ತಾರೆ.ಊರಿನ ಹಿತಕ್ಕಾಗಿ ಹೋಮ ಹವನಗಳನ್ನು ಮಾಡಿದ್ದಾರೆ.ಮುಂದಿನ ದಿನಗಳಲ್ಲಿ ಸರ್ಕಾರದಿಂದ ದೇವಾಲಯಕ್ಕೆ ಅನುದಾನ ನೀಡಿ ಜೀರ್ಣೋದ್ಧಾರ ಮಾಡಬೇಕು ಎಂದು ಹೇಳಿದರು..