ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11, 13ನೇ ವಾರಕ್ಕೆ ಕಾಲಿಟ್ಟು ಮುನ್ನುಗ್ಗುತ್ತಿದೆ. ಇದೇ ಹೊತ್ತಲ್ಲಿ ಬಿಗ್ಬಾಸ್ ಮನೆಯಿಂದ ಆಚೆ ಬರ್ತಾನಾ ಹನುಮಂತ ಎನ್ನುವ ಚರ್ಚೆ ಶುರುವಾಗಿದೆ. ಹೌದು ಹನುಮಂತ ಅವರು ದೊಡ್ಮನೆಯಿಂದ ಹೊರ ಹೋಗುವ ನಿರ್ಧಾರಕ್ಕೆ ಬಂದಿದ್ದಾರೆ. ಅವರು ಹೇಳಿದ್ದು ಏನು? ಇದಕ್ಕೆ ಕಾರಣ ಏನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
‘ಬಿಗ್ ಬಾಸ್ ಕನ್ನಡ ಸೀಸನ್ 11’ರ 12ನೇ ವಾರದಲ್ಲಿ ಕ್ಯಾಪ್ಟನ್ಸಿ ರೇಸ್ನಲ್ಲಿ ಆರು ಮಂದಿ ಇದ್ದರು. ಇದನ್ನು ಐದಕ್ಕೆ ಇಳಿಕೆ ಮಾಡಲು ಒಂದು ಟಾಸ್ಕ್ ನೀಡಲಾಗಿತ್ತು. ಪಕ್ಷಪಾತಿ, ಜನ ನಿರ್ವಹಣೆಯಲ್ಲಿ ಅಶಕ್ತ ಈ ರೀತಿಯ ನಾಲ್ಕು ಆಯ್ಕೆ ನೀಡಲಾಗಿತ್ತು. ಕ್ಯಾಪ್ಟನ್ಸಿ ರೇಸ್ನಲ್ಲಿ ಇರುವ ಆರು ಮಂದಿಯ ಪೈಕಿ ಒಬ್ಬರ ಗುಣ ಯಾವುದಕ್ಕೆ ಹೊಂದಿಕೆ ಆಗುತ್ತದೆ ಎಂಬುದನ್ನು ಹೇಳಿ ಆ ಬಳಿಕ ಅವರನ್ನು ಸ್ವಿಮ್ಮಿಂಗ್ಪೂಲ್ಗೆ ತಳ್ಳಬೇಕು.
Long Pepper: ಹಿಪ್ಪಲಿಯ ಔಷಧೀಯ ಗುಣಗಳ ಬಗ್ಗೆ ನಿಮಗೆ ಗೊತ್ತಾದ್ರೆ ಶಾಕ್ ಆಗೋದು ಗ್ಯಾರಂಟಿ.!?
‘ಜನ ನಿರ್ವಹಣೆಯಲ್ಲಿ ಅಶಕ್ತ’ ಮತ್ತಿತ್ಯಾದಿ ಆಯ್ಕೆಯಲ್ಲಿ ಹನುಮಂತ ಅವರು ಭವ್ಯಾ ಹೆಸರನ್ನು ತೆಗೆದುಕೊಂಡರು. ಆದರೆ, ಇದನ್ನು ಭವ್ಯಾ ಅವರು ಒಪ್ಪಿಕೊಳ್ಳಲೇ ಇಲ್ಲ. ಬದಲಿಗೆ ಹನುಮಂತ ಬಳಿ ವಾದಕ್ಕೆ ಇಳಿದರು. ಈ ವಾದವನ್ನು ಮುಂದುವರಿಸಲು ಹನುಮಂತಗೆ ಯಾವುದೇ ಆಸಕ್ತಿ ಇರಲಿಲ್ಲ. ಹೀಗಾಗಿ, ಅವರು ಸುಮ್ಮನಾದರು. ಆದರೆ, ಭವ್ಯಾ ಮಾತ್ರ ಏನೇನೋ ಮಾತನಾಡುತ್ತಲೇ ಇದ್ದರು. ಈ ವಿಚಾರ ಭವ್ಯಾಗೆ ಬೇಸರ ಮೂಡಿಸಿದೆ.
ದೋಸ್ತಾ ಬಸ್ ಬುಕ್ ಮಾಡು, ಊರಿಗೆ ಹೋಗ್ತೀನಿ’ ಎಂದು ಹನುಮಂತ ಹೇಳಿದರು. ಇದನ್ನು ಕೇಳಿ ಧನರಾಜ್ಗೆ ಶಾಕ್ ಆಯಿತು. ಅವರು ಹನುಮಂತನ ಸಮಾಧಾನ ಮಾಡಲು ಪ್ರಯತ್ನಿಸಿದರು. ಆದರೆ, ಹನುಮಂತ ಅವರು ಇದಕ್ಕೆ ಒಪ್ಪಿಲ್ಲ. ‘ಇಲ್ಲಿ ನೆನಪು ಇಟ್ಟುಕೊಂಡು ಮಾತನಾಡುವವರು ಬೇಕು. ಆದರೆ, ನನಗೆ ಯಾವುದೂ ನೆನಪಿನಲ್ಲಿ ಇರಲ್ಲ. ಅಷ್ಟುದ್ದ ಮಾತನಾಡೋಕೆ ಬರಲ್ಲ. ನನಗೆ ನೆನಪಿನ ಶಕ್ತಿ ಕಡಿಮೆ ಇದೆ’ ಎಂದಿದ್ದಾರೆ
ಕಳೆದ ಬಾರಿ ಕಳಪೆ ಸ್ಥಾನದಲ್ಲಿ ಇಬ್ಬರು ಸ್ಪರ್ಧಿಗಳಿದ್ದರು. ತ್ರಿವಿಕ್ರಮ್ ಹಾಗೂ ಚೈತ್ರಾ ಕುಂದಾಪುರ ಬಿಗ್ಬಾಸ್ ಮನೆಯ ಜೈಲು ಸೇರಿದ್ದರು. ಈ ವಾರ ಕಳಪೆ ಸ್ಥಾನವನ್ನು ಚೈತ್ರಾ ಅವರೇ ಇಟ್ಟುಕೊಂಡಿದ್ದಾರೆ. ಸತತವಾಗಿ ಚೈತ್ರಾ ಅವರು ಜೈಲು ಸೇರುತ್ತಿದ್ದಾರೆ.