ಬೆಂಗಳೂರು:- ಸಾರ್ವಜನಿಕ ಸ್ಥಳದಲ್ಲೆ ಯುವತಿ ಎದುರಿಗೆ ವ್ಯಕ್ತಿಯೊಬ್ಬನಿಂದ ಹಸ್ತ ಮೈಥುನ ಮಾಡಿ ಅಸಭ್ಯವಾಗಿ ವರ್ತಿಸಿದ ಘಟನೆ ಮಹಾದೇವಪುರದ ಪಾರ್ಕ್ ಎದುರಿನ ಸರ್ವೀಸ್ ರಸ್ತೆಯಲ್ಲಿ ಘಟನೆ ಜರುಗಿದೆ.
ಯುವತಿಯೋರ್ವರು ಕಾರನ್ನ ಪಾರ್ಕ್ ಮಾಡಿ ಕಾರಿನಲ್ಲಿ ಕುಳಿತುಕೊಂಡಿದ್ದರು. ಅ ಸಮಯದಲ್ಲಿ ಕಾರಿನ ಮುಂಭಾಗದಲ್ಲಿ ಹಸ್ತಮೈಥುನ ಮತ್ತು ಅಸಭ್ಯ ವರ್ತನೆ ಮಾಡಿದ್ದಾನೆ. ಅದನ್ನ ನೋಡಿ ಹೆದರಿಕೆಯಿಂದ ಯುವತಿ ಕಾರ್ ಡೋರ್ ಲಾಕ್ ಮಾಡಿಕೊಂಡಿದ್ದಾನೆ.
ಅನಂತರ ಕಾರಿನ ಬಳಿ ಬಂದು ಕಾರಿನ ಸುತ್ತಲ ಓಡಾಡಿದ್ದಾನೆ. ನಂತರ ಬೆದರಿಕೆ ಹಾಕುವ ದೃಷ್ಟಿಯಲ್ಲಿ ಯುವತಿಯನ್ನ ನೋಡಿದ್ದಾನೆ. ಹೆದರಿಕೆಯಿಂದ ಅತನ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಸ್ಟಿಯರಿಂಗ್ ಕೆಳಗೆ ಯುವತಿ ಅರಿತುಕೊಂಡಿದ್ದಾಳೆ. ಅಕೆಯ ಸ್ನೇಹತರೊಬ್ಬರು ಬಂದ ನಂತರ ಕಾರಿನಿಂದ ಯುವತಿ ಕೆಳಗಿಳಿದ್ದಾಳೆ.
ಟ್ವೀಟ್ ನಲ್ಲಿ ತಾನು ಅನುಭವಿಸಿದ ಸಮಸ್ಯೆ ಬಗ್ಗೆ ಯುವತಿ ಬರೆದು ಕೊಂಡಿದ್ದಾರೆ. ಜನವರಿ 5 ನೇ ತಾರಿಖಿನಂದು ನಡೆದಿರುವ ಘಟನೆ ಬಗ್ಗೆ ಉಲ್ಲೇಖ ಮಾಡಲಾಗಿದೆ. ಮಹಾದೇವಪುರ ಪೊಲೀಸ್ ಠಾಣೆಗೆ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಸೂಚನೆ ನೀಡಲಾಗಿದೆ.