ಕಲಬುರಗಿಯಲ್ಲಿ ನಡೆದ ಹನಿಟ್ರಾಪ್ ಪ್ರಕರಣವನ್ನ ಸಿಬಿಐಗೆ ಕೊಡಿ ಅಂತ ಬಿಜೆಪಿ ಮಾಜಿ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ್ ಆಗ್ರಹಿಸಿದ್ದಾರೆ..ಕಲಬುರಗಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪಾಟೀಲ್ ಈ ಪ್ರಕರಣದಲ್ಲಿ ಗೋವಾ ಮಹಾರಾಷ್ಟ್ರ ಸೇರಿದಂತೆ ಬೇರೆ ಬೇರೆ ರಾಜ್ಯದ ನೊಂದವರು ಇದ್ದಾರೆ ಅನ್ನೋದು ಬೆಳಕಿಗೆ ಬಂದಿದೆ.
ಅಲ್ಲದೇ ಅನೇಕರು ಈ ಹನಿಟ್ರಾಪ್ ದಿಂದ ಭಯಭೀತರಾಗಿದ್ದಾರೆ.ಅದಕ್ಕಾಗಿ ಎಲ್ಲರಿಗೂ ನ್ಯಾಯ ಸಿಗಬೇಕು ಅಂದ್ರೆ ಸಿಬಿಐ ತನಿಖೆ ಸೂಕ್ತ ಅಂತ ಹೇಳಿದ್ದಾರೆ…