ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ವಿದ್ಯಾನಗರದ ಬೂತ್ ನಂಬರ್ 91 ರಲ್ಲಿ ಮತಯಂತ್ರ ಕೈಕೊಟ್ಟಿದೆ. ಸುಮಾರು 45 ನಿಮಿಷಗಳವರೆಗೂ ಮತಯಂತ್ರ ಸ್ತಬ್ಧವಾಗಿದೆ. ಮತಯಂತ್ರ ರಿಪೇರಿಗೆ ಬಾರದ ಅಧಿಕಾರಿಗಳು,
ನೂರಾರು ಸಂಖ್ಯೆಯಲ್ಲಿ ಮತವನ್ನು ಚಲಾಯಿಸಲು ಬಂದ ಪುರುಷ ಮತದಾರರು ಮತ್ತು ಮಹಿಳಾ ಮತದಾರರು ಹೈರಾಣಾಗಿ ಅಧಿಕಾರಿಗಳ ವಿರುದ್ಧ ಶಾಪ ಹಾಕುತ್ತಿದ್ದಾರೆ. ಇನ್ನು ಕೂಡ ಮತಯಂತ್ರ ಪ್ರಾರಂಭವಾಗಿಲ್ಲ.ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಲು ಬಂದ ಮತದಾರರಿಗೆ ನಿರಾಸೆ
ಪ್ರಕಾಶ ಕುಂಬಾರ
ಬಾಗಲಕೋಟೆ