ಮಹದೇವಪುರ : ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಕಣ ರಂಗೇರಿದ್ದು , ಕೈ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಪರ ಸಚಿವ ಬೈರತಿ ಸುರೇಶ್ ಮತಯಾಚನೆ ಮಾಡುವ ಜೊತೆಗೆ ತಮ್ಮ ತೀಕ್ಷ್ಣ ಮಾತುಗಳ ಮೂಲಕ ಬಿಜೆಪಿ ಜೆಡಿಎಸ್ ಅನ್ನು ಕುಟುಕಿದ್ದಾರೆ .
ಕ್ಷೇತ್ರದ ನಲ್ಲೂರಹಳ್ಳಿ,ಮಾರತಹಳ್ಳಿ , ಮುನ್ನೆಕೊಳಲು ವರ್ತೂರು,ಗುಂಜುರು,ಕೊಡತಿ,ಬೆಳ್ಳಂದೂರು ಸೇರಿದಂತೆ ವಿವಿಧೆಡೆ ಮತಯಾಚನೆಯಲ್ಲಿ ಭಾಗಿಯಾಗಿದ್ದ ಸಚಿವ ಭೈರತಿ ಸುರೇಶ್ , ಅಭ್ಯರ್ಥಿ ಪರ ಬಿರುಸಿನ ಪ್ರಚಾರವನ್ನು ಕೈಗೊಂಡಿದ್ದರು ,
ಇದೇ ವೇಳೆ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು ಈ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿ ಅಧಿಕಾರಕ್ಕೆ ಬಂದರೆ ಕಾಂಗ್ರೆಸ್ ಸರ್ಕಾರದ ಎಲ್ಲಾ ಯೋಜನೆಗಳನ್ನು ತಡೆಹಿಡಿಯುವ ಜೊತೆಗೆ ಸಂವಿಧಾನವನ್ನು ಬದಲಾವಣೆ ಮಾಡುವ ಹುನ್ನಾರ ನಡೆಯಲಿದೆ ಎಂದು ಆರೋಪ ಮಾಡಿದ್ರು , ಈ ಚುನಾವಣೆ ಕಾಂಗ್ರೆಸ್ ಹಾಗೂ ಬಿಜೆಪಿಯ ಮಧ್ಯೆ ಅಲ್ಲ , ಬಡವರ ಪಕ್ಷ ಹಾಗೂ ಶ್ರೀಮಂತರ ಪಕ್ಷದ ನಡುವೆ ಎಂದು ತಿಳಿಸಿದರು .
IPL 2024 KKR V/s RR: ಟಾಸ್ ಗೆದ್ದ RR ಬೌಲಿಂಗ್, ಕೆಕೆಆರ್ ಬ್ಯಾಟಿಂಗ್!
ಬಿಜೆಪಿಗರು ಜಾತಿ , ಜನಾಂಗ ದೇಶದ ಅಭಿವೃದ್ಧಿ ವಿರೋಧಿಗಳು ಅವರಿಗೆ ಮಹದೇವಪುರ ಕ್ಷೇತ್ರದ ಜನತೆ ಮತ ಯಾಕೆ ನೀಡುತ್ತಿದ್ದೀರಿ ಎಂದು ಪ್ರಶ್ನಿಸಿದರು. ಕಳೆದ 15 ವರ್ಷಗಳಿಂದ ಈ ಭಾಗದಿಂದ ಹೆಚ್ಚು ಮತ ಪಡೆಯುತ್ತಿರುವ ಪಿ .ಸಿ ಮೋಹನ್ ಅವರ ಕಾರ್ಯ ಏನು ಬರೀ ಶೂನ್ಯ , ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳ ಕಂಪ್ಲೀಟ್ ರಿಪೋರ್ಟ್ ತಂದಲ್ಲಿ ಮಾತ್ರ ಅವರಿಗೆ ಮತ ನೀಡಿ ಇಲ್ಲದಲ್ಲಿ ಈ ಬಾರಿಯ ನಮ್ಮ ಕೈ ಅಭ್ಯರ್ಥಿಗೆ ಮತ ನೀಡುವ ಮೂಲಕ ದೇಶದ ಅಭಿವೃದ್ಧಿಗೆ ಕೈಜೋಡಿಸಿ ಎಂದು ಹೇಳಿದರು .
ಕೈ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಮಾತನಾಡಿ ಬರಗಾಲದ ಸಂದರ್ಭದಲ್ಲೂ ಕೇಂದ್ರ ಸರ್ಕಾರ ಬರದ ಅನುದಾನ ನೀಡುತ್ತಿಲ್ಲ ,ಪ್ರಶ್ನಿಸುವ ಧೈರ್ಯ ಚುನಾವಣೆಯಲ್ಲಿ ಆಯ್ಕೆಯಾದವರಿಗಿಲ್ಲ .
ನನಗೆ ಮತ ನೀಡಿ ಕರ್ನಾಟಕ ಹಾಗೂ ಬೆಂಗಳೂರಿನ ಅಭಿವೃದ್ಧಿಗೆ ಶ್ರಮಿಸುತ್ತೇನೆ . ರಾಜ್ಯದ ಜನತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಂತೆ ದೇಶದಲ್ಲೂ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತಂದು ಬಿಜೆಪಿಗರನ್ನು ಮನೆ ಕಡೆಗೆ ಕಳಿಸಬೇಕಾದ ಕಾರ್ಯ ಮಾಡಬೇಕಿದೆ ಎಂದರು .
ಈ ಸಂದರ್ಭದಲ್ಲಿ ಮಾಜಿ ಸಚಿವ ಎಚ್ ನಾಗೇಶ್ , ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಲ್ಲೂರಹಳ್ಳಿ ನಾಗೇಶ್,ಮಾಜಿ ಪಾಲಿಕೆ ಸದಸ್ಯ ಉದಯ್ ಕುಮಾರ್, ಕೆಪಿಸಿಸಿ ಸದಸ್ಯ ಜಯರಾಮರೆಡ್ಡಿ ಸೇರಿದಂತೆ ಮತ್ತಿತರರು ಇದ್ದರು .