ವಿಜಯನಗರ : ಐತಿಹಾಸಿಕನಗರಿ ವಿಜಯನಗರದಲ್ಲಿ ಹಂಪಿ ಉತ್ಸವ ಆರಂಗೊಂಡಿದ್ದು, ಹಂಪಿ ಉತ್ಸವ ಪಯುಕ್ತದ ಪ್ರದರ್ಶನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಜಮೀರ್ ಅಹ್ಮದ್ ಚಾಲನೆ ನೀಡಿದರು.
ನಗರದ ಹಂಪಿ ವಿರುಪಾಕ್ಷೇಶ್ವರ ದೇವಸ್ಥಾನ ಮುಖ್ಯ ಬೀದಿಯಲ್ಲಿ ವಸ್ತುಪ್ರದರ್ಶನ ಆಯೋಜಿಸಲಾಗಿದ್ದು ವಸ್ತು ಪ್ತದರ್ಶನದಲ್ಲಿ ಮುಂಭಾಗದಲ್ಲಿ ಕಲ್ಲಿನ ತೇರು ಮುಖ್ಯ ಆಕರ್ಷಣೆಯಾಗಿದೆ. ಇದಲ್ಲದೇ ಫಲಪುಷ್ಪ ಪ್ರದರ್ಶನ, ಕೃಷಿ ಪರಿಕರಗಳ ವಿಕ್ಷಣೆ, ಅರಣ್ಯ ಇಲಾಖೆಯ ವಸ್ತು ಪ್ರದರ್ಶನ, ಹೂವಿನಿಂದ ಮಾಡಿರುವ ಹಂಪಿಯ ಚಿನ್ಹೆ ಉದ್ಘಾಟನೆ ವಿಶೇಷವಾಗಿತ್ತು.
ಡಿಕೆಶಿ ಅವರ ರಕ್ತದಲ್ಲೇ ಕಾಂಗ್ರೆಸ್ ಇದೆ ; ಡಿಸಿಎಂ ಪರ ಬ್ಯಾಟ್ ಬೀಸಿದ ಸಚಿವ ಜಮೀರ್
ಇನ್ನೂ ಸಚಿವ ಜಮೀರ್ ಅಹ್ಮದ್ ಅವರಿಗೆ ನಗರ ಶಾಸಕ ಗವಿಯಪ್ಪ, ಜಿಲ್ಲಾಧಿಕಾರಿ ದಿವಾಕರ್ ಸಾಥ್ ನೀಡಿದರು. ಇನ್ನು ಪ್ರತಿಯೊಂದು ವಸ್ತು ಪ್ರದರ್ಶನದ ಬಗ್ಗೆ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಗಣ್ಯರಿಗೆ ಮಾಹಿತಿ ನೀಡಿದರು.