ವಿಜಯನಗರ : ಹಂಪಿ ಉತ್ಸವದ ಅಂಗವಾಗಿ ಇಂದಿನಿಂದ ಹಂಪಿಯನ್ನು ಆಗಸದಿಂದ ಕಣ್ತುಂಬಿಕೊಳ್ಳುವ ಹಂಪಿ ಬೈ ಸ್ಕೈ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ವಿಜಯನಗರ ಶಾಸಕ ಎಚ್ ಆರ್ ಗವಿಯಪ್ಪ ಹಾಗೂ ವಿಜಯನಗರ ಡಿಸಿ ದಿವಾಕರ್ ಅವರು ಜಂಟಿಯಾಗಿ ಭುವನೇಶ್ವರಿಗೆ ಪೂಜೆ ಸಲ್ಲಿಸಿ, ಹೆಲಿಕ್ಯಾಪ್ಟರ್ಗೆ ಹಸಿರು ನಿಶಾನೆ ಧ್ವಜ ಹಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇನ್ನು ಈ ವೇಳೆ ಮಾತನಾಡಿದ ಇಬ್ಬರೂ ಜನರಿಗೆ ಕೈಗೆಟುಕುವ ದರದಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಇನ್ನು ಉತ್ಸವಕ್ಕೆ ಡಿಕೆ ಶಿವಕುಮಾರ್ ಅವರ ಆಗಮನದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರ ನೀಡಿದ ಶಾಸಕ ಗವಿಯಪ್ಪ, ಇಂದು ಬರುತ್ತಾರೆ ಎಂಬ ಆಶಯವಿದೆ. ಈಗಾಗಲೇ ಹಲವು ಬಾರಿ ಅವರನ್ನು ಆಹ್ವಾನಿಸಲಾಗಿದೆ. ಇಂದು ಬರುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದರು.