ತುಮಕೂರು: ಒಂದೇ ತಿಂಗಳಲ್ಲಿ ಪಾಲಿಕೆಗೆ ವರ್ಷದ ಅರ್ಧದಷ್ಟು ತೆರಿಗೆ ಹಣ ಹರಿದು ಬಂದಿದೆ. ಶೇ.5% ರಿಯಾಯಿತಿ ಸೌಲಭ್ಯ ಕೊಟ್ಟ ಹಿನ್ನೆಲೆ ಜನರು ಮುಗಿಬಿದ್ದು ಕಟ್ಟಿದ್ದಾರೆ. ವಾರ್ಷಿಕ 58 ಕೋಟಿ ತೆರಿಗೆಯ ಗುರಿಯನ್ನು ಹೊಂದಿತ್ತು.. ಇದರಲ್ಲಿ ಅರ್ಧದಷ್ಟು ತೆರಿಗೆ ಒಂದೇ ತಿಂಗಳಲ್ಲಿ ವಸೂಲಿಯಾಗಿದೆ. ಏಪ್ರಿಲ್ 1ರಿಂದ 30ರವರೆಗೆ ಒಟ್ಟು 29.34ಕೋಟಿ ಸಂಗ್ರಹವಾಗಿದ್ದು,
24.81ಕೋಟಿ ಪ್ರಾಪರ್ಟಿ, 4.14 ಕೋಟಿ ವಾಟರ್, 39.21ಲಕ್ಷ ಯುಜಿಡಿ ಟ್ಯಾಕ್ಸ್ ಸೇರಿದಂತೆ ಏ. 30ರ ಒಂದೇ ದಿನ 2.90 ಕೋಟಿ ತೆರಿಗೆ ಸಾರ್ವಜನಿಕರು ಪಾವತಿಸಿದ್ದಾರೆ. ಕರ್ನಾಟಕ ಒನ್ ಸೆಂಟರ್, ಪಾಲಿಕೆ ಅಂಗಳದಲ್ಲಿ ತೆರೆದ ಕ್ಯಾಶ್ ಕೌಂಟರ್ ಇದ್ದು, ಆನ್ ಲೈನ್ ಮೂಲಕ ಸಾರ್ವಜನಿಕರು ತೆರಿಗೆ ಪಾವತಿ ಮಾಡಿದ್ದಾರೆ. ಶೇ.5ರಷ್ಟು ರಿಯಾಯಿತಿ ಸೌಲಭ್ಯಕ್ಕೆ ಸಾರ್ವಜನಿಕರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ರಿಯಾಯಿತಿ ಸೌಲಭ್ಯವನ್ನು ಮುಂದುವರೆಸುವಂತೆ ಆಗ್ರಹಿಸಿದ್ದಾರೆ.