ಭೋಪಾಲ್:– ಮಧ್ಯಪ್ರದೇಶದ ರತ್ಲಾಮ್ನಲ್ಲಿರುವ, ಪ್ರಸಿದ್ಧ ಕಾಳಿಕಾ ದೇವಾಲಯವು ಕೂಡ ವಸ್ತ್ರಸಂಹಿತೆ ಜಾರಿಗೊಳಿಸಿದ್ದು, ಭಕ್ತಾದಿಗಳು ವಿದೇಶಿ ಹಾಗೂ ತುಂಡುಡುಗೆ ಧರಿಸಿ ಬರುವಂತಿಲ್ಲ ಎಂದು ಆದೇಶಿಸಿದೆ.
ಮಳೆಯ ಆರ್ಭಟ: ಚಾಮರಾಜನಗರದಲ್ಲಿ ಪ್ರವಾಹ ಭೀತಿ, ಹೈ ಅಲರ್ಟ್ ಘೋಷಿಸಿದ ಜಿಲ್ಲಾಡಳಿತ!
ದೇವಾಲಯದ ಅರ್ಚಕ ರಾಜೇಂದ್ರ ಶರ್ಮಾ ಅವರು ವಸ್ತ್ರಸಂಹಿತೆ ಜಾರಿಗೊಳಿಸಿದ್ದಾರೆ. “ದೇವಾಲಯದ ಪಾವಿತ್ರ್ಯ ಕಾಪಾಡಲು, ಭಕ್ತರು ವಿದೇಶಿ ಹಾಗೂ ತುಂಡುಡುಗೆ, ಶಾರ್ಟ್ಸ್ಗಳನ್ನು ಧರಿಸಿ ಬಂದರೆ, ಅವರಿಗೆ ದೇವಾಲಯ ಪ್ರವೇಶಿಸಲು ಅನುಮತಿ ನೀಡುವುದಿಲ್ಲ. ಇಂತಹ ಉಡುಪು ಧರಿಸಿ ಬರುವ ಯಾರಿಗೂ ದೇವಾಲಯದ ಗರ್ಭಗುಡಿ ಪ್ರವೇಶಿಸಲು ಭದ್ರತಾ ಸಿಬ್ಬಂದಿಯು ಬಿಡುವುದಿಲ್ಲ. ಅಂತಹ ಭಕ್ತಾದಿಗಳು ದೇವಾಲಯದ ಹೊರಗಿನಿಂದಲೇ ದರ್ಶನ ಪಡೆದು ಹೋಗಬೇಕಾಗುತ್ತದೆ” ಎಂಬುದಾಗಿ ಅರ್ಚಕ ತಿಳಿಸಿದ್ದಾರೆ.
ಸುಮಾರು 400 ವರ್ಷಗಳ ಹಿಂದೆ ರತ್ಲಾಮ್ ಅರಸನಾಗಿದ್ದ ರತನ್ ಸಿಂಗ್ ಅವರು ಕಾಳಿಕಾ ದೇವಿಯ ಆರಾಧಕರಾಗಿದ್ದು, ಅವರು ದೇವಾಲಯವನ್ನು ನಿರ್ಮಿಸಿದ್ದಾರೆ. ಪ್ರಸಕ್ತ ದೇವಾಲಯದ ನಿರ್ವಹಣೆಯನ್ನು ಕೋರ್ಟ್ ಆಫ್ ವಾರ್ಡ್ಸ್ ಕಾಯ್ದೆ ಅಡಿಯಲ್ಲಿ ಜಿಲ್ಲಾಡಳಿತವೇ ನೋಡಿಕೊಳ್ಳುತ್ತದೆ. ತಹಸೀಲ್ದಾರ್ ರಿಷಭ್ ಠಾಕೂರ್ ಅವರು ಕೂಡ ವಸ್ತ್ರಸಂಹಿತೆ ಕುರಿತು ಮಾತನಾಡಿದ್ದಾರೆ. “ದೇವಾಲಯದ ನಿರ್ವಹಣಾ ಸಮಿತಿಯು ಪಾಶ್ಚಿಮಾತ್ಯ ಉಡುಪುಗಳನ್ನು ನಿರ್ಬಂಧಿಸಿದೆ” ಎಂದು ಹೇಳಿದ್ದಾರೆ.