ಕೆಲವರ ಅತೀ ದೊಡ್ಡ ಸಮಸ್ಯೆ ಎಂದರೆ ಕೂದಲು ಉದ್ದ ಬೆಳೆಯದೆ ಇರುವುದು. ನನ್ನ ಕೂದಲು ಬಹಳ ನಿಧಾನವಾಗಿ ಬೆಳೆಯುತ್ತದೆ, ಅಷ್ಟೇ ಅಲ್ಲ, ಒಂದು ಹಂತದ ನಂತರ ಬೆಳವಣಿಗೆ ನಿಂತಂತೆ ಭಾಸವಾಗುತ್ತದೆ. ಭುಜದವರೆಗೆ ಬೆಳೆದ ನಂತರ ಬೆಳೆಯುವುದೇ ಇಲ್ಲ ಅನಿಸುತ್ತದೆ ಎಂಬುದು ಹಲವರ ದೂರು. ಇಂಥವರಿಗೆ ತಮ್ಮ ಕೂದಲ ಬಗ್ಗೆ ಇನ್ನಾವುದೇ ಕಂಪ್ಲೇಂಟುಗಳಿರುವುದಿಲ್ಲ. ಬದಲಾಗಿ ಕೂದಲು ಬೆಳೆಯುವುದಿಲ್ಲ ಎಂಬುದೇ ದೊಡ್ಡ ಸಮಸ್ಯೆ.
ನಡುರಸ್ತೆಯಲ್ಲೇ ಹೆಂಡತಿಯನ್ನು ಬರ್ಬರವಾಗಿ ಕೊಲೆಗೈದ ಗಂಡ! ಹತ್ಯೆಗೆ ಕಾರಣ ಏನು ಗೊತ್ತಾ!?
ಅನೇಕ ಜನರು ಕೂದಲು ಉದುರುವಿಕೆಯ ಸಮಸ್ಯೆಯನ್ನು ತಡೆಯಲು ಮತ್ತು ಉದ್ದ ಹಾಗೂ ದಪ್ಪ ಪಡೆಯಲು ಹಲವಾರು ವಿಧಾನಗಳನ್ನು ಅನುಸರಿಸಿ ವಿಫಲರಾಗುತ್ತಿದ್ದಾರೆ..
ಅಷ್ಟೇ ಅಲ್ಲ, ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ರೀತಿಯ ಕೂದಲು ತೈಲಗಳು ಮತ್ತು ಸೌಂದರ್ಯ ಉತ್ಪನ್ನಗಳನ್ನು ಬಳಸುತ್ತಿದ್ದಾರೆ. ಇನ್ನು ಕೆಲವರು ಮನೆಯಲ್ಲಿಯೇ ನೈಸರ್ಗಿಕ ಮನೆಮದ್ದುಗಳನ್ನು ಅನುಸರಿಸುತ್ತಾರೆ. ಆದರೆ, ಕೂದಲು ದಟ್ಟವಾಗಿ ಬೆಳೆಯುವುದಿಲ್ಲ.
ಕೂದಲು ದಪ್ಪ ಮತ್ತು ವೇಗವಾಗಿ ಬೆಳೆಯಬೇಕು, ಅದಕ್ಕಾಗಿ ಏನು ಮಾಡಬೇಕು..? ಬನ್ನಿ ನಿಮ್ಮ ಈ ಪ್ರಶ್ನೆಗೆ ಸರಿಯಾದ ಉತ್ತರವನ್ನು ನಾವು ನೀಡುತ್ತೇವೆ.. ಕೂದಲು ಬೇಗ ಬೆಳೆಯಲು ಬಯಸುವವರು ಮೆಂತ್ಯ ಸೊಪ್ಪಿನ ಜೊತೆಗೆ ಮೆಂತ್ಯವನ್ನು ಸೇರಿಸಿ ಪೇಸ್ಟ್ ಬಳಸಬಹುದು..
ಹೌದು.. ಮೊದಲು ಮೆಂತ್ಯ ಬೀಜಗಳನ್ನು ತೆಗೆದುಕೊಂಡು ಕರಿಬೇವಿನ ಎಲೆಗಳು ಮತ್ತು ಆಮ್ಲಾ ತುಂಡುಗಳನ್ನು ಅದಕ್ಕೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮೂರನ್ನೂ ಮಿಕ್ಸ್ ಮಾಡಿ ನಯವಾದ ಪೇಸ್ಟ್ ಮಾಡಿಕೊಳ್ಳಿ. ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ, ಒಂದು ಗಂಟೆ ಹಾಗೆ ಬಿಡಿ. ಅದರ ನಂತರ, ಯಾವುದೇ ಶಾಂಪೂ ಬಳಸಿ ಸ್ನಾನ ಮಾಡಿ. ವಾರದಲ್ಲಿ ಎರಡರಿಂದ ಮೂರು ಬಾರಿ ಈ ಪರಿಹಾರವನ್ನು ಮಾಡುವುದರಿಂದ ಕೂದಲು ದಟ್ಟವಾಗಿ ಬೆಳೆಯುತ್ತದೆ.