ಕೂದಲು ಉದ್ದವಾಗಿ, ಹೊಳೆಯುತ್ತಿರಬೇಕು ಎಂದು ಎಲ್ಲಾ ಹೆಣ್ಣು ಮಕ್ಕಳು ಬಯಸುತ್ತಾರೆ. ಯಾಕೆಂದರೆ ತಲೆಯ ಕೂದಲು ಹೆಣ್ಣಿನ ಅಂದವನ್ನು ಹೆಚ್ಚಿಸುತ್ತದೆ. ಮಹಿಳೆಯೊಬ್ಬಳು ಉದ್ದವಾದ ಕೂದಲನ್ನು ಬಿಟ್ಟುಕೊಂಡು ಬೀದಿಯಲ್ಲಿ ನಡೆದುಕೊಂಡು ಹೋದರೆ ಎಲ್ಲರೂ ಒಮ್ಮೆಲೆ ಅವಳನ್ನೇ ಕಣ್ಣು ಬಿಟ್ಟುಕೊಂಡು ನೋಡುತ್ತಿರುತ್ತಾರೆ. ಆದರೆ ಇಂದಿನ ದಿನಗಳಲ್ಲಿ ವಾತಾವರಣದ ಕೊಳೆ, ಧೂಳು, ಹಾಗೂ ಹಾರ್ಮೋನ್ಗಳ ಸಮಸ್ಯೆ ಮತ್ತು ರಾಸಾಯನಿಕಯುಕ್ತ ಹೇರ್ ಪ್ರೊಡಕ್ಟ್ಗಳನ್ನು ಬಳಸುವುದರಿಂದ ಕೂದಲುದುರುವ ಸಮಸ್ಯೆ ಕಾಡುತ್ತಿದೆ. ಹಾಗಾಗಿ ಕೂದಲು ಬಾಚುವಾಗ ನೆಲದ ಮೇಲೆ ಕೂದಲಿನ ರಾಶಿ ಬಿದ್ದಿರುವುದು ನೋಡಿದರೆ ಮನಸ್ಸಿಗೆ ಬೇಸರವಾಗುತ್ತದೆ.
ಪಿಜ್ಜಾ, ಬರ್ಗರ್ ನೂಡಲ್ಸ್ ಬಿಡಿ ರಾಗಿ ಮುದ್ದೆ ಸೇವಿಸಿ: ಬೆಂಗಳೂರಿನಲ್ಲಿ ಮಾದರಿ ಕಾರ್ಯಕ್ರಮ!
ಕೂದಲಿಗೆ ಈರುಳ್ಳಿ ರಸ ಹಚ್ಚಿದರೆ ಏನಾಗುತ್ತದೆ? ಕೂದಲಿನ ಎಲ್ಲಾ ರೀತಿಯ ಸಮಸ್ಯೆಗಳಿಗೆ ಈರುಳ್ಳಿ ರಸವು ತುಂಬಾ ಪರಿಣಾಮಕಾರಿ ಮನೆಮದ್ದಾಗಿದೆ. ಪ್ರತಿದಿನವೂ ಈರುಳ್ಳಿ ರಸವನ್ನ ಬಳಸುವುದರಿಂದ ಕೂದಲಿನ ಎಲ್ಲಾ ಸಮಸ್ಯೆಗಳಿಂದಲೂ ಮುಕ್ತಿ ಸಿಗುತ್ತದೆ.
ಈರುಳ್ಳಿ ರಸದಲ್ಲಿರುವ ಅಂಶಗಳು ನಿಮ್ಮ ಕೂದಲಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ನಿಮಗೆ ತಿಳಿದಿದೆಯೇ? ಕೂದಲು ಉದುರುವಿಕೆಯ ಸಮಸ್ಯೆಯನ್ನು ತೊಡೆದುಹಾಕಲು ನೀವು ಈರುಳ್ಳಿ ರಸವನ್ನು ಬಳಸಬಹುದು.
ಹೌದು, ಈರುಳ್ಳಿ ರಸದಲ್ಲಿರುವ ಅಂಶಗಳು ನಿಮ್ಮ ಕೂದಲನ್ನು ಬಲಪಡಿಸುವಲ್ಲಿ ಪರಿಣಾಮಕಾರಿ. ಹೀಗಾಗಿ ನಿಮ್ಮ ಕೂದಲು ದಪ್ಪವಾಗಬೇಕೆಂದು ಬಯಸಿದರೆ ನಿಯಮಿತವಾಗಿ ಈರುಳ್ಳಿ ರಸವನ್ನು ಬಳಸಲು ಪ್ರಾರಂಭಿಸಿ.
ಕೂದಲಿನ ಆರೈಕೆಯ ದಿನಚರಿಯ ಭಾಗವಾಗಿ ಈರುಳ್ಳಿ ರಸವನ್ನು ಸೇರಿಸುವುದರಿಂದ ಬೋಳು ಸಮಸ್ಯೆಯಿಂದಲೂ ನೀವು ಮುಕ್ತಿ ಪಡೆಯಬಹುದು. ಈ ಈರುಳ್ಳಿ ರಸವು ಕೂದಲನ್ನು ದೀರ್ಘಕಾಲದವರೆಗೆ ಕಪ್ಪಾಗಿಡಲು ಸಹಕಾರಿಯಾಗಿದೆ.
ಬೂದು ಕೂದಲನ್ನು ತೊಡೆದುಹಾಕಲು ಈರುಳ್ಳಿ ರಸವನ್ನು ಸಹ ಬಳಸಬಹುದು. ತಲೆಹೊಟ್ಟು ಸಮಸ್ಯೆಯನ್ನು ತೊಡೆದುಹಾಕಲು, ನಿಮ್ಮ ಕೂದಲಿನ ಆರೈಕೆಯ ದಿನಚರಿಯಲ್ಲಿ ಈರುಳ್ಳಿ ರಸವನ್ನು ಸೇರಿಸಿಕೊಳ್ಳಬಹುದು. ಉತ್ತಮ ಫಲಿತಾಂಶಗಳನ್ನು ಪಡೆಯಲು ನೀವು ವಾರಕ್ಕೆ ಎರಡು ಬಾರಿ ಈರುಳ್ಳಿ ರಸವನ್ನು ಬಳಸಬಹುದು.