ಬೆಂಗಳೂರು: ನಿರ್ದೇಶಕ, ನಟ, ಬರಹಗಾರ ಮಠ ಖ್ಯಾತಿಯ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿದ್ದು ಈಗ ಎಲ್ಲರಲ್ಲೂ ಅಚ್ಚರಿಯನ್ನುಂಟು ಮಾಡಿದೆ. ಇನ್ನೂ ನಟ ತಬಲಾ ನಾಣಿ ಗುರುಪ್ರಸಾದ್ ಕಂಬನಿ ಮಿಡಿದಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನನಗೆ ಕನ್ನಡ ಚಿತ್ರರಂಗದಲ್ಲಿ ಜೀವನ ಕೊಟ್ಟವರು ಗುರುಪ್ರಸಾದ್ ಎಂದಿದ್ದಾರೆ.
ಗುರುಪ್ರಸಾದ್ ಆತ್ಮಹತ್ಯೆ ಸುದ್ದಿ ಕೇಳಿ ಬೇಜಾರಾಯಿತು. ಅವರು 10 ಜನಕ್ಕೆ ಆಗೋವಷ್ಟು ಬುದ್ಧಿವಂತ, ಅವರಿಗೆ ಅಷ್ಟು ತಲೆ ಇತ್ತು. ಏನಿಕ್ಕೆ ಹೀಗೆ ಮಾಡಿಕೊಂಡರು ಗೊತ್ತಾಗುತ್ತಿಲ್ಲ. ಸಹವಾಸಗಳ ಸಮಸ್ಯೆನೋ, ಕೆಟ್ಟ ಚಟಗಳ ಸಮಸ್ಯೆಯೋ ತಿಳಿಯುತ್ತಿಲ್ಲ. ಈಗ ನಾವೇನಾದ್ರೂ ಮಾತನಾಡಿದ್ರೆ ಗುರು ನಿಂದನೆಯಾಗುತ್ತದೆ. ನನಗೆ ಚಿತ್ರರಂಗದಲ್ಲಿ ಜೀವನ ಕೊಟ್ಟವರು ಗುರುಪ್ರಸಾದ್. ‘ಮಠ’, ‘ಎದ್ದೇಳು ಮಂಜುನಾಥ’ ಸಿನಿಮಾ ಟೀಮ್ ಅದೆಷ್ಟು ಚೆನ್ನಾಗಿತ್ತು ಎಂದು ಸ್ಮರಿಸಿದರು.
Mutual Fund: ಜಸ್ಟ್ 1 ಲಕ್ಷ ಹೂಡಿಕೆ ಮಾಡಿದ್ರೆ ಸಾಕು 1 ಕೋಟಿ ರೂ. ನಿಮ್ಮದಾಗುತ್ತೆ! ಹೇಗೆ ಗೊತ್ತಾ..?
ಕಡೆಯದಾಗಿ ಒಂದು ಫಂಕ್ಷನ್ನಲ್ಲಿ ಸಿಕ್ಕಿದ್ದರು. ಎಷ್ಟು ಟ್ಯಾಲೆಂಟೆಡ್ ಆಗಿದ್ರೂ, ಅವರು ಹೀಗೆ ಮಾಡಿಕೊಂಡಿದ್ದಾರೆ ಅಂದರೆ ನಂಬೋಕೆ ಆಗ್ತಿಲ್ಲ. ಕೆಲಸದಲ್ಲಿ ಪಾದರಸದ ಹಾಗೇ ಇದ್ರೂ, ಒಂದು ಕೇಳಿದ್ರೆ 10 ಉತ್ತರ ಕೊಡುತ್ತಿದ್ದರು. ಮೊದಲ ಬಾರಿಗೆ ಅವರನ್ನು ಭೇಟಿಯಾದಾಗ ಒಂದು ಮಾತು ಹೇಳಿದ್ದರು. ನಿಮಗೆ ತುಂಬಾ ಟ್ಯಾಲೆಂಟ್ ಇದೆ, ನನ್ನ ಜೊತೆ ಇರಿ ಇಡೀ ಕರ್ನಾಟಕ ನಿಮ್ಮನ್ನು ಗುರುತಿಸಬೇಕು ಹಾಗೇ ಮಾಡುತ್ತೇನೆ ಎಂದಿದ್ದರು. ಅಂದು ಗುರುಪ್ರಸಾದ್ ಹೇಳಿದ ಮಾತನ್ನು ಅವರು ಉಳಿಸಿಕೊಂಡರು.