ಕಲಬುರಗಿ: ಬೆಳ್ಳಂಬೆಳಿಗ್ಗೆ ಅಕ್ರಮವಾಗಿ ಡ್ರಗ್ ಸಪ್ಲೈ ಮಾಡುತಿದ್ದ ಆರೋಪಿ ಮೇಲೆ ಪೊಲೀಸರು ಗುಂಡು ಹಾರಿಸಿರೋ ಘಟನೆ ಕಲಬುರಗಿ ಹೊರ ವಲಯದ ತಾವರಗೇರಾ ಬಳಿ ನಡೆದಿದೆ. ಸುಪ್ರೀತ್ ನವಲೇ (32) ಮೇಲೆ ಫೈರಿಂಗ್ ಮಾಡಲಾಗಿದ್ದು,
ಅಕ್ರಮವಾಗಿ ಕಾರ್ ನಲ್ಲಿ ಡ್ರಗ್ಸ್ ಸಪ್ಲೈ ಮಾಡ್ತಾ ಇದ್ದ ಅನ್ನೋ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದ್ದಾರೆ. ಪೊಲೀಸರು ಕಾರ್ ನಿಲ್ಲಿಸಿ ತಪಾಸಣೆ ಮಾಡುವಾಗ ಪೊಲೀಸರ ಮೇಲೆ ಆರೋಪಿ ಚಾಕುವಿನಿಂದ ದಾಳಿ ಮಾಡಿದ್ದಾನೆ.
Ghee Tea: ತುಪ್ಪದ ಟೀ ಕುಡಿದಿದ್ದೀರಾ..? ಕುಡಿದ್ರೆ ಸಿಗುತ್ತೆ ಈ ಆರೋಗ್ಯ ಲಾಭಗಳು!
ಹೆಡ್ ಕಾನ್ಸ್ಟೇಬಲ್ ಗುರುಮೂರ್ತಿ ಮೇಲೆ ಚಾಕುವಿನಿಂದ ಹಲ್ಲೆ ಮಾಡಲಾಗಿದ್ದು, ಚೌಕ್ ಠಾಣೆ PI ರಾಘವೇಂದ್ರರಿಂದ ಎಡಗಾಲಿಗೆ ಫೈರಿಂಗ್ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯ ಗಾಯಾಳು ಸುಪ್ರೀತ್ ನನ್ನು ಜಿಮ್ಸ್ ಆಸ್ಪತ್ರೆಯ ಟ್ರಾಮಾ ಕೇರ್ ಸೆಂಟರ್ ಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ.