ಕ್ರಿಕೆಟ್ ಲೋಕದ ಕಿಂಗ್ ಆದ್ರೆ ಅದು ವಿರಾಟ್ ಕೊಹ್ಲಿ. ಇದರಲ್ಲಿ ಎರಡು ಮಾತಿಲ್ಲ.. ಫೀಲ್ಡಲ್ಲಿ ಇವರು ತೋರುವ ಅಗ್ರೆಷನ್, ಎನರ್ಜಿ, ಆಟಗಾರರನ್ನು ಉರಿದುಂಬಿಸುವ ರೀತಿಗೆ ಫ್ಯಾನ್ಸ್ ಕಳೆದೇ ಹೋಗುತ್ತಾರೆ.
ಮಾತೃಭಾಷೆ ಉರ್ದು, ಸಂಸ್ಕೃತದಲ್ಲಿ ಟಾಪರ್.. ಮುಸ್ಲಿಂ ಬಾಲಕನ ಸಾಧನೆಗೆ ವ್ಯಾಪಕ ಮೆಚ್ಚುಗೆ!
ಇನ್ನೂ ವಿರಾಟ್ ಕೊಹ್ಲಿ ಮೈದಾನದಲ್ಲಿ ತಮ್ಮನ್ನಾಗಲಿ, ತಮ್ಮ ತಂಡದವರನ್ನಾಗಲಿ ಕೆಣಕಿದವರಿಗೆ ಸುಮ್ಮನೇ ಬಿಟ್ಟಿದ್ದೇ ಇಲ್ಲ. ಖಡಕ್ ರಿಯಾಕ್ಷನ್ಗಳ ಮೂಲಕ ಏಟಿಗೆ-ಎದುರೇಟು ಕೊಟ್ಟೇ ತೀರುತ್ತಾರೆ.
ಪ್ರತಿಯೊಬ್ಬ ಅಭಿಮಾನಿಯನ್ನು ನಕ್ಕುನಲಿಸುವ ಕೊಹ್ಲಿ, ಗೌತಮ್ ಗಂಭೀರ್, ಅವೇಶ್ ಖಾನ್, ನವೀನ್ ಹುಲ್ ಹಕ್ ಅವರಿಗೆ ಅವರದ್ದೇ ಶೈಲಿಯಲ್ಲಿ ತಿರುಗೇಟು ನೀಡಿದ್ದರು. ಇತ್ತೀಚೆಗೆ ತಮ್ಮ ಸ್ಟ್ರೇಕ್ರೇಟ್ ಕುರಿತು ಮಾತನಾಡುತ್ತಿದ್ದ ಸುನೀಲ್ ಗವಾಸ್ಕರ್ ಅವರಿಗೂ ಬ್ಯಾಟ್ ಮೂಲಕವೇ ಉತ್ತರ ಕೊಟ್ಟ ಕಿಂಗ್ ಕೊಹ್ಲಿ, ಮೈದಾನದಲ್ಲಿ ಪಂಜಾಬ್ ಕಿಂಗ್ಸ್ ಆಟಗಾರ ರೀಲಿ ರುಸ್ಸೊ ಅವರಿಗೆ ಅವರದ್ದೇ ಶೈಲಿಯಲ್ಲಿ ತಿರುಗೇಟು ಕೊಟ್ಟಿದ್ದಾರೆ.
ಆರ್ಸಿಬಿ ನೀಡಿದ 242 ರನ್ಗಳ ಬೃಹತ್ ಮೊತ್ತ ಬೆನ್ನಟ್ಟಿದ್ದ ಕಿಂಗ್ಸ್ ಪಂಜಾಬ್ ಪರ ಎಡಗೈ ಆಟಗಾರ ರೀಲಿ ರುಸ್ಸೊ (Rilee Rossouw) ಸ್ಫೋಟಕ ಅರ್ಧಶತಕ ಬಾರಿಸಿದರು. ಅರ್ಧಶತಕ ಬಾರಿಸಿದ ಬಳಿಕ ಅವರು ಗನ್ ಶಾಟ್ ರೀತಿಯ ಭಂಗಿ ಮೂಲಕ ಸಂಭ್ರಮಿಸಿದ್ದರು. ಆದರೆ, ಅರ್ಧಶತಕದ ಬಳಿಕ ಕರಣ್ ಶರ್ಮಾ ಎಸೆತದಲ್ಲಿ ವಿಲ್ ಜಾಕ್ಸ್ಗೆ ಕ್ಯಾಚಿತ್ತು ರುಸ್ಸೊ ಔಟಾದರು. ರುಸ್ಸೊ ಔಟಾಗುತ್ತಲೇ ವಿರಾಟ್ ಕೊಹ್ಲಿ ಅವರೂ ಗನ್ನಿಂದ ಶೂಟ್ ಮಾಡುವ ರೀತಿ ಕುಟುಕಿದರು. ಈ ವೀಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಕೊಹ್ಲಿ ಅಭಿಮಾನಿಗಳಂತೂ ಈ ವೀಡಿಯೋ ನೋಡಿ ಖುಷಿಪಟ್ಟಿದ್ದಾರೆ. ಇನ್ನೂ ಕೆಲವರು ಕೆಜಿಎಫ್-2 ಚಿತ್ರದಲ್ಲಿ ಯಶ್ ಅವರು ಹಿಡಿಯುವ ಕಲಾಶ್ನಿಕಾವೊ ಗನ್ಗೆ ಹೋಲಿಸಿ ಸಂಭ್ರಮಿಸಿದ್ದಾರೆ.