ಸಿಂಗಪುರ:- ತನ್ನ 18ನೇ ವಯಸ್ಸಿಗೆ ಭಾರತದ ಡಿ.ಗುಕೇಶ್ ವಿಶ್ವ ಚೆಸ್ ಚಾಂಪಿಯನ್ ಆಗಿದ್ದಾರೆ.
2024-25ರಲ್ಲಿ 1.4 ಲಕ್ಷ ಕೋಟಿ ಸಾಲ ಮಾಡಿದ್ದೇವೆ: ಸತ್ಯ ಒಪ್ಪಿಕೊಂಡ CM ಸಿದ್ದರಾಮಯ್ಯ!
ವಿಶ್ವ ಚಾಂಪಿಯನ್ಷಿಪ್ ಗೆಲುವಿನ ಕನಸು ನನಸಾದ ಕ್ಷಣ ಗುಕೇಶ್ ಅವರಿಗೆ ತಮ್ಮ ಭಾವನೆಗಳನ್ನು ತಡೆದುಕೊಳ್ಳಲಿಲ್ಲ. ಅಲ್ಲದೆ ಭಾವುಕರಾಗಿ ಕಣ್ಣೀರು ಸುರಿಸಿದ್ದಾರೆ.
ಇಲ್ಲಿ ನಡೆದ ರೋಚಕ ಹಣಾಹಣಿಯ 14ನೇ ಮತ್ತು ಅಂತಿಮ ಪಂದ್ಯದಲ್ಲಿ ಗೆದ್ದ ಭಾರತದ ಗುಕೇಶ್ ವಿಶ್ವ ಚೆಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಚೀನಾದ ಪ್ರಶಸ್ತಿ ವಿಜೇತ ಡಿಂಗ್ ಲಿರೆನ್ ಅವರನ್ನು ಸೋಲಿಸುವ ಮೂಲಕ ಭಾರತದ ಗ್ರ್ಯಾಂಡ್ಮಾಸ್ಟರ್ ಡಿ ಗುಕೇಶ್ ಗುರುವಾರ 18 ನೇ ವಯಸ್ಸಿನಲ್ಲಿ ಕಿರಿಯ ವಿಶ್ವ ಚೆಸ್ ಚಾಂಪಿಯನ್ ಆಗಿದ್ದಾರೆ.
14 ಪಂದ್ಯಗಳ ಕೊನೆಯ ಕ್ಲಾಸಿಕಲ್ ಗೇಮ್ ಅನ್ನು ಗೆದ್ದ ನಂತರ ಲಿರೆನ್ ಅವರ 6.5 ಗೆ ಹೋಲಿಸಿದರೆ ಗುಕೇಶ್ 7.5 ಅಂಕಗಳನ್ನು ಗಳಿಸಿದರು.
ರಷ್ಯಾದ ದಂತಕಥೆ ಗ್ಯಾರಿ ಕಾಸ್ಪರೋವ್ ಅವರು 1985 ರಲ್ಲಿ ಅನಾಟೊಲಿ ಕಾರ್ಪೋವ್ ಅವರನ್ನು ಸೋಲಿಸುವ ಮೂಲಕ 22 ನೇ ವಯಸ್ಸಿನಲ್ಲಿ ಪ್ರಶಸ್ತಿಯನ್ನು ಗೆದ್ದ ಕಿರಿಯ ವಿಶ್ವ ಚೆಸ್ ಚಾಂಪಿಯನ್ ಎಂಬ ದಾಖಲೆಯನ್ನು ಬರೆದಿದ್ದರು. ಈಗ ಆ ದಾಖಲೆಯನ್ನು ಗುಕೇಶ್ ಉಡೀಸ್ ಮಾಡಿದ್ದಾರೆ.