ನ್ಯೂಯಾರ್ಕ್ : ಅಮೆರಿಕದ ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಷನ್ನ(ಎಫ್ಬಿಐ) 10 ಮೋಸ್ಟ್ ವಾಂಟೆಡ್ ದೇಶಭ್ರಷ್ಟರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಭಾರತದ ಭದ್ರೇಶ್ ಕುಮಾರ್ ಚೇತನ್ ಭಾಯ್ ಪಟೇಲ್ ಬಂಧನಕ್ಕಾಗಿ ಪ್ರಯತ್ನ ಮುಂದುವರಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
2015ರಲ್ಲಿ ಅಮೆರಿಕದಲ್ಲಿ ತನ್ನ ಪತ್ನಿಯನ್ನು ಕೊಲೆಗೈದ ಬಳಿಕ 34 ವರ್ಷದ ಗುಜರಾತ್ ಮೂಲದ ಪಟೇಲ್ ನಾಪತ್ತೆಯಾಗಿದ್ದಾನೆ. ಶಸ್ತ್ರಾಸ್ತ್ರ ಹೊಂದಿರುವ ಈತ ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗಿದ್ದು ಈತನ ಬಗ್ಗೆ ಮಾಹಿತಿ ಒದಗಿಸುವಂತೆ ಎಫ್ಬಿಐ ಮನವಿ ಮಾಡಿದೆ.
2017 ರಿಂದ ಯುಎಸ್ನಲ್ಲಿ ಮೋಸ್ಟ್ ವಾಂಟೆಡ್ ಕ್ರಿಮಿನಲ್ಗಳಲ್ಲಿ ಅವರ ಪತ್ನಿ ಪಾಲಕ್ ಪಟೇಲ್ ಅವರನ್ನು ಹತ್ಯೆಗೈದ ಆರೋಪ ಭದ್ರೇಶ್ ಕುಮಾರ್ ಮೇಲೆ ಕೇಳಿ ಬಂದಿದೆ.
ಭದ್ರೇಶ್ ಮತ್ತು ಪಾಲಕ್ ಅವರು 2014 ರಲ್ಲಿ ವಿಸಿಟಿಂಗ್ ವೀಸಾದ ಮೇಲೆ ಯುಎಸ್ಗೆ ಹೋಗಿದ್ದರು ಮತ್ತು ಅವರ ಸಂಬಂಧಿ ಮಾಲೀಕತ್ವದ ಮೇರಿಲ್ಯಾಂಡ್ನ ಹ್ಯಾನೋವರ್ನಲ್ಲಿರುವ ಡಂಕಿನ್ ಡೋನಟ್ಸ್ನಲ್ಲಿ ಕೆಲಸ ಮಾಡುತ್ತಿದ್ದರು.
ವಿಸಿಟಿಂಗ್ ವೀಸಾ ಅವಧಿ ಮುಗಿದ ನಂತರವೂ ದಂಪತಿಗಳು ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿದ್ದರು.
24 ವರ್ಷ ವಯಸ್ಸಿನ ಪಟೇಲ್ ಕೊನೆಯದಾಗಿ ಏಪ್ರಿಲ್ 12, 2015 ರಂದು ದಂಪತಿಗಳು ಕೆಲಸ ಮಾಡುತ್ತಿದ್ದ ಅಂಗಡಿಯಲ್ಲಿ ಕಾಣಿಸಿಕೊಂಡಿದ್ದರು.
ಅಂಗಡಿಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದದ್ದ ಪಾಲಕ್ನ ಶವವನ್ನು ಪೊಲೀಸರು ಪತ್ತೆ ಮಾಡುವ ಕೆಲವೇ ಕ್ಷಣಗಳ ಮೊದಲು ಭದ್ರತೆ ಕಣ್ಮರೆಯಾಗಿದ್ದಾನೆ.