ಗುಜರಾತ್:- ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ಬಿದ್ದ ಹಿನ್ನೆಲೆ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಸೂರತ್ನ ಸಚಿನ್ ಪ್ರದೇಶದಲ್ಲಿ ಘಟನೆ ಜರುಗಿದೆ.
ಬೈಕ್ಗೆ ಡಿಕ್ಕಿ ಹೊಡೆದ ಅಪರಿಚಿತ ಕಾರು – ಇಬ್ಬರು ಸವಾರರು ಸ್ಪಾಟ್ Death!
ಆರು ಅಂತಸ್ತಿನ ಕಟ್ಟಡ ಕುಸಿದು ಬಿದ್ದಿರುವ ಮಾಹಿತಿ ಸಿಕ್ಕಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಸುಮಾರು 4-5 ಫ್ಲಾಟ್ಗಳು ಬಿದ್ದಿವೆ. ಓರ್ವ ಮಹಿಳೆಯನ್ನು ರಕ್ಷಿಸಲಾಗಿದೆ ಆದರೆ ಸುಮಾರು 3-4 ಜನರು ಇನ್ನೂ ಅವಶೇಷಗಳೊಳಗೆ ಸಿಲುಕಿದ್ದಾರೆ. ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ತಂಡಗಳು (ಅವರನ್ನು ರಕ್ಷಿಸಲು) ಕಾರ್ಯನಿರ್ವಹಿಸುತ್ತಿವೆ” ಎಂದು ಸೂರತ್ ಜಿಲ್ಲಾಧಿಕಾರಿ ಸೌರಭ್ ಪಾರ್ಧಿ ಪಿಟಿಐಗೆ ತಿಳಿಸಿದರು.
2016-17 ರಲ್ಲಿ ನಿರ್ಮಿಸಲಾದ ಪಾಲಿ ಗ್ರಾಮದಲ್ಲಿ ಕಟ್ಟಡವೊಂದು ಕುಸಿದಿದೆ. ಒಬ್ಬ ಮಹಿಳೆಯನ್ನು ರಕ್ಷಿಸಲಾಗಿದೆ, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 2-3 ಜನರು ಒಳಗೆ ಸಿಲುಕಿಕೊಂಡಿದ್ದಾರೆ. ತಜ್ಞರು ಇಲ್ಲಿದ್ದಾರೆ ಮತ್ತು ಮುಂದಿನ ಒಂದು ಅಥವಾ ಎರಡು ಗಂಟೆಗಳಲ್ಲಿ ನಾವು ಉಳಿದ ವ್ಯಕ್ತಿಗಳನ್ನು ಹೊರತರಲು ಸಾಧ್ಯವಾಗುತ್ತದೆ ಎಂದು ಭಾವಿಸುತ್ತೇವೆ ಎಂದು ಸೂರತ್ ಪೊಲೀಸ್ ಕಮಿಷನರ್ ಹೇಳಿಕೆ ಕೊಟ್ಟಿದ್ದಾರೆ