ನೆಲಮಂಗಲ:- ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸೋಲೂರು ಹೋಬಳಿಯ ಅರಸನಕುಂಟೆ ಗ್ರಾಮದಲ್ಲಿ ಸುಮಾರು 50 ಲಕ್ಷ ರೂ ವೆಚ್ಚದಲ್ಲಿ ನೂತನ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ನೆಲಮಂಗಲ ಶಾಸಕ ಎನ್. ಶ್ರೀನಿವಾಸ್ ಗುದ್ದಲಿ ಪೂಜೆ ನೇರವೆರಿಸಿದರು.
ಟೆಕ್ಕಿ ಮಿಸ್ಸಿಂಗ್ ಪ್ರಕರಣಕ್ಕೆ ಟ್ವಿಸ್ಟ್: ಗಂಡ ಮನೆ ಬಿಡಲು ಹೆಂಡತಿಯೇ ಕಾರಣ!
ಕಚ್ಚಾ ರಸ್ತೆ ಮುಕ್ತ ಗ್ರಾಮ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡುವ ಮೂಲಕ ವಿಧಾನ ಸಭಾಕ್ಷೇತ್ರ ವ್ಯಾಪ್ತಿಯ ಪ್ರತಿ ಹಳ್ಳಿಗಳಲ್ಲಿ ಸ್ವಚ್ಛ ಸುಂದರ ರಸ್ತೆ ನಿರ್ಮಾಣ ಮಾಡುವುದು ನಮ್ಮ ಗುರಿಯಾಗಿದ್ದು, ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಅನುದಾನ ತಂದು ಪ್ರತಿ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ. ನನ್ನ ಅಧಿಕಾರ ಅವಧಿಯಲ್ಲಿ ಅರಸನಕುಂಟೆ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡಲು ಪ್ರಯತ್ನಿಸುತ್ತೇನೆ. ಈ ರಸ್ತೆಗೆ ಚರಂಡಿ ಅಗತ್ಯವಾಗಿ ಬೇಕಿದ್ದು ನರೇಗಾ ವತಿಯಿಂದ ಚರಂಡಿಯನ್ನು ಮಾಡಿಸಿ ಕೊಡುವಂತೆ ಗ್ರಾ.ಪಂ.ಗೆ ಸೂಚನೆ ನೀಡಿದ್ದೇನೆ, ತಾಲೂಕಿನ ತಿಮ್ಮಸಂದ್ರ ಗ್ರಾಮಕ್ಕೂ ರಸ್ತೆ ಬೇಡಿಕೆಯನ್ನು ಗ್ರಾಮಸ್ಥರು ಇಟ್ಟಿದ್ದಾರೆ ಆ ಭಾಗದ ರಸ್ತೆ ಅಭಿವೃದ್ಧಿಗೂ ಚಿಂತನೆ ನಡೆಸುತ್ತಿದ್ದೇವೆ ಜೊತೆಗೆ ಅರಸನಕುಂಟೆ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಅಂಬೇಡ್ಕರ್ ಭವನ ನಿರ್ಮಾಣ ಮಾಡಿ ಎಂದು ಗ್ರಾಮಸ್ಥರು ಬೇಡಿಕೆ ಇಟ್ಟಿದ್ದಾರೆ. ಅತಿ ಶೀಘ್ರದಲ್ಲೇ ಶುದ್ಧ ಕುಡಿಯುವ ನೀರಿನ ಘಟಕವನ್ನು ತೆರೆಯುವ ಕೆಲಸ ಮಾಡಲಿದ್ದೇನೆ.ಎಂದರು.
ಗ್ರಾಮಸ್ಥ ಗುರು ಪ್ರಸಾದ್ ಮಾತನಾಡಿ, ಗ್ರಾಮ ಸ್ವರಾಜ್ಯದ ಪರಿಕಲ್ಪನೆಯನ್ನು ಶಾಸಕರು ಹೊಂದಿರುವುದು ಅತೀವ ಸಂತಸವಾಗಿದೆ ಎಂದರು.
ಈ ವೇಳೆಯಲ್ಲಿ ಕಾಂಗ್ರೇಸ್ ಜಿಲ್ಲಾಧ್ಯಕ್ಷ ಸಿ.ಆರ್ ಗೌಡ, ತಾ. ಪಂ ಮಾಜಿ ಅಧ್ಯಕ್ಷ ಎಂ ನಾಗರಾಜ್, ಸೋಲೂರು ಗ್ರಾ. ಪಂ. ಮಾಜಿಅಧ್ಯಕ್ಷ ನಾಗ ರುದ್ರಶರ್ಮ, ಕಾಂಗ್ರೆಸ್ ಮುಖಂಡರಾದ ರಂಗಸ್ವಾಮಿ, ಬಿಟ್ಟಸಂದ್ರ ಗ್ರಾ.ಪಂ.ಅಧ್ಯಕ್ಷ ಗಂಗರಂಗಯ್ಯ, ರಮೇಶ್. ಅರಸನಕುಂಟೆ ವಾಡ್೯ ನ ಗ್ರಾ.ಪಂ. ಸದಸ್ಯರಾದ ಶಶಿಕುಮಾರ್, ಪುಟ್ಟರಾಜು, ಮಾಜಿ ಸದಸ್ಯ ರಾಜು, ಗ್ರಾಮಸ್ಥರಾದ ಅನಂತರಾಮು ತಿಮ್ಮರಾಜು, ಜಯರಾಮು,ಬೈಲಾಂಜನೇಯ,ದಿವಾಕರ್,ದರ್ಶನ್, ಮಂಜುನಾಥ್,ಗಂಗರಾಜು, ನಂದನ್, ಶ್ರೀಕಂಠಯ್ಯ, ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.