ಬಿಗ್ಬಾಸ್ ಕನ್ನಡ ಸೀಸನ್ 11 ಮುಗಿಯಲು ಕೆಲವೇ ದಿನಗಳು ಬಾಕಿ ಇದೆ. ಹನುಮಂತುಗೆ ಈಗಾಗೇ ಫಿನಾಲೆ ಟಿಕೆಟ್ ಸಿಕ್ಕಾಗಿದೆ. ಈ ಸೀಸನ್ನ ಕೊನೆಯ ಕ್ಯಾಪ್ಟನ್ ಆಗಿ ಅವರು ಆಯ್ಕೆ ಆಗಿದ್ದಾರೆ. ಇಂದು ಶನಿವಾರವಾಗಿದ್ದು ವಾರದ ಪಂಚಾಯಿತಿ ನಡೆಸಿಕೊಡಲು ಸುದೀಪ್ ಬಂದಿದ್ದಾರೆ. ಈ ವಾರ ಮನೆಯ ಸ್ಪರ್ಧಿಗಳು ಬಲು ಜಿದ್ದಾಜಿದ್ದಿನಿಂದ ಗೇಮ್ಗಳನ್ನು ಆಡಿದ್ದಾರೆ. ಒಬ್ಬರ ಮೇಲೊಬ್ಬರು ಬಿದ್ದು, ಹೊಡೆದಾಡಿಕೊಂಡು, ಬೈದಾಡಿಕೊಂಡು ಆಟ ಆಡಿದ್ದಾರೆ.
ಬಿಗ್ ಬಾಸ್ ಸೀಸನ್ 11 ದಿನದಿಂದ ದಿನಕ್ಕೆ ಹೊಸ ಹೊಸ ಟ್ವಿಸ್ಟ್ ಪಡೆದುಕೊಂಡು ಮುನ್ನುಗ್ಗುತ್ತಿದೆ. 104ನೇ ದಿನಕ್ಕೆ ಕಾಲಿಟ್ಟಿರೋ ಬಿಗ್ಬಾಸ್ ಮನೆಯಲ್ಲಿ ಒಟ್ಟು 9 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಆದ್ರೆ ಈ ವಾರ ಬಿಗ್ಬಾಸ್ ಮನೆಯಿಂದ ಆಚೆ ಹೋಗಲು 5 ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ.
ತ್ರಿವಿಕ್ರಮ್, ಮೋಕ್ಷಿತಾ ಪೈ, ಭವ್ಯಾ ಗೌಡ, ಚೈತ್ರಾ ಕುಂದಾಪುರ ಹಾಗೂ ಧನರಾಜ್ ಆಚಾರ್ ನಾಮಿನೇಷನ್ ಬಿಸಿಯಲ್ಲಿದ್ದಾರೆ. ಈ ಐದು ಮಂದಿಯಲ್ಲಿ ಈ ವಾರ ಒಬ್ಬರು ಎಲಿಮಿನೇಟ್ ಆಗಲಿದ್ದಾರೆ. ನಾಮಿನೇಷನ್ನಲ್ಲಿ ಸ್ಟ್ರಾಂಗ್ ಸ್ಪರ್ಧಿಗಳೇ ಇರುವುದರಿಂದ ಈ ವಾರ ಔಟ್ ಆಗೋರು ಯಾರು ಎಂಬ ಕುತೂಹಲ ವೀಕ್ಷಕರಲ್ಲಿ ಮನೆ ಮಾಡಿದೆ.
ಇನ್ನೂ, ಎರಡು ವಾರದಲ್ಲಿ 4 ಸ್ಪರ್ಧಿಗಳು ಬಿಗ್ಬಾಸ್ ಮನೆಯಿಂದ ಆಚೆ ಹೋಗಲಿದ್ದಾರೆ. ಆಗ 5 ಸ್ಪರ್ಧಿಗಳು ಬಿಗ್ಬಾಸ್ ಗ್ರ್ಯಾಂಡ್ ಫಿನಾಲೆಗೆ ಎಂಟ್ರಿ ಕೊಡಲಿದ್ದಾರೆ. ಆದ್ರೆ ಚೈತ್ರಾ ಕುಂದಾಪುರ ಸಾಕಷ್ಟು ಬಾರಿ ಬಾಟಂ 2ಗೆ ಬಂದಿದ್ದರು. ಅಲ್ಲದೇ ಮೋಕ್ಷಿತಾ ಕೂಡ ಬಾಟಂ 2 ಬಂದಿದ್ದರು. ಇನ್ನೂ ಭವ್ಯಾ ಗೌಡ ಕೂಡ ಬಂದಿದ್ದರು. ಆದ್ರೆ ಈ ವಾರದ ಆಟವನ್ನು ನೋಡಿದ ವೀಕ್ಷಕರು ಯಾರಿಗೆ ಅತಿ ಹೆಚ್ಚು ವೋಟ್ಸ್ ಕೊಟ್ಟು ಸೇವ್ ಮಾಡಿದ್ದಾರೆ. ಯಾರಿಗೆ ಕಡಿಮೆ ವೋಟ್ ಹಾಕಿದ್ದಾರೆ ಅಂತ ನಾಳಿನ ಸಂಚಿಕೆಯಲ್ಲಿ ಗೊತ್ತಾಗಲಿದೆ