ಹೈದರಾಬಾದ್: ಪಂಚರಾಜ್ಯ ಚುನಾವಣೆಯಲ್ಲಿ ಗ್ಯಾರಂಟಿಗಳು ಸಖತ್ ಸದ್ದು ಮಾಡ್ತಿವೆ. ತೆಲಂಗಾಣದಲ್ಲಿ (Telangana) ಅಧಿಕಾರದ ಫಸಲು ತೆಗೆಯಲು ಕರ್ನಾಟಕ ಮಾದರಿಯಲ್ಲೇ ಇಲ್ಲೂ ಕೂಡ ಕಾಂಗ್ರೆಸ್ ಪಕ್ಷ (Congress Guarantee) ಗ್ಯಾರಂಟಿಗಳನ್ನು ನಂಬಿಕೊಂಡಿದೆ. ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಆರು ಗ್ಯಾರಂಟಿಗಳನ್ನು ಘೋಷಿಸಿದ್ದಾರೆ.
HAL Recruitment: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ʼನಲ್ಲಿದೆ ಉದ್ಯೋಗಾವಕಾಶ..! ಬೆಂಗಳೂರಿನಲ್ಲಿಯೇ ಪೋಸ್ಟಿಂಗ್
ಕಾಮಾರೆಡ್ಡಿ ಕ್ಷೇತ್ರದಲ್ಲಿ ರೇವಂತ್ ರೆಡ್ಡಿ (Revanth Reddy) ಪರ ಸಿಎಂ ಸಿದ್ದರಾಮಯ್ಯ ಪ್ರಚಾರ ನಡೆಸಿದ್ರು. ಸಿಎಂ ಕೆಸಿಆರ್ ವಿರುದ್ಧ ರೇವಂತ್ ಗೆಲ್ಲೋದು ಫಿಕ್ಸ್ ಅಂದ್ರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನೂರು ದಿನದಲ್ಲಿ ಗ್ಯಾರಂಟಿಗಳನ್ನು ಜಾರಿ ಮಾಡಲಾಗುತ್ತೆ ಎಂಬ ಭರವಸೆಯನ್ನು ಸಿಎಂ ಸಿದ್ದರಾಮಯ್ಯ ನೀಡಿದ್ರು. ಕೆಸಿಆರ್ ಕರ್ನಾಟಕಕ್ಕೆ ಬಂದು ಗ್ಯಾರಂಟಿಗಳ ಜಾರಿಯನ್ನು ನೋಡಲಿ ಎಂದು ಸವಾಲ್ ಹಾಕಿದ್ರು.
ಕಾಂಗ್ರೆಸ್ನಲ್ಲಿ ಆರು ಗ್ಯಾರಂಟಿ..!
* ಗ್ಯಾರಂಟಿ 1 – ಪ್ರತಿ ತಿಂಗಳು ಅತ್ತೆಗೆ 4,000 ರೂ. – ಸೊಸೆಗೆ 2,500 ರೂ.
* ಗ್ಯಾರಂಟಿ 2 – ಪ್ರತಿ ಹೆಣ್ಣುಮಗುವಿನ ಖಾತೆಗೆ ಪ್ರತಿ ತಿಂಗಳು 2,500 ರೂ. (ಮಹಾಲಕ್ಷ್ಮಿ ಯೋಜನೆ)
* ಗ್ಯಾರಂಟಿ 3 – ಪಿಂಚಣಿ ಮೊತ್ತ 2,000 ರೂ.ನಿಂದ 4,000 ರೂ.ಗೆ ಹೆಚ್ಚಳ
* ಗ್ಯಾರಂಟಿ 4 – 500 ರೂಪಾಯಿಗೆ ಒಂದು ಗ್ಯಾಸ್ ಸಿಲಿಂಡರ್
* ಗ್ಯಾರಂಟಿ 5 – ಮನೆ ನಿರ್ಮಾಣಕ್ಕೆ 5 ಲಕ್ಷ ರೂ. ನೆರವು
* ಗ್ಯಾರಂಟಿ 6 – ಬಡವರಿಗೆ 200 ಯೂನಿಟ್ವರೆಗೂ ಉಚಿತ ವಿದ್ಯುತ್