ತುಮಕೂರು : ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮೀ ಯೋಜನೆ ಅದೆಷ್ಟೋ ಮಹಿಳೆಯರ ಪಾಲಿಗೆ ವರದಾನನವಾಗಿದೆ. ಈ ಗೃಹಲಕ್ಷ್ಮೀ ಹಣದಿಂದ ಕೆಲ ಮಹಿಳೆಯರು ಬದುಕು ಕಟ್ಟಿಕೊಂಡು ಸ್ವಾವಲಂಬಿಯಾಗಲು ಪ್ರಯತ್ನಿಸಿದ್ದಾರೆ. ಇದೀಗ ತನ್ನ ಮಗಳ ವಿದ್ಯಾಭ್ಯಾಸಕ್ಕೆಂದು ಕಂಪ್ಯೂಟರ್ ಕೊಡಿಸಿದ್ದಾರೆ.
ತುಮಕೂರು ಜಿಲ್ಲೆ ತಿಪಟೂರು ಗಾಂಧಿ ನಗರದ ಕೆರಗೋಡಿ ವಾಸಿ ಸಾಧಿಕ್ ಹಾಗೂ ನಗ್ಮಭಾನು ದಂಪತಿಯು ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣದಲ್ಲಿ ಮಗಳಿಗೆ ಕಂಪ್ಯೂಟರ್ ಕೊಡಿಸಿದ್ದಾರೆ. ತಾಯಿ ನಗ್ಮಾ ಬಾನು ಓದಲು ಅನುಕೂಲ ಆಗಲೆಂದು ಮಗಳು ಸೈದಾ ಆಫೀಫಾಗೆ ಕಂಪ್ಯೂಟರ್ ಕೊಡಿಸಿದ್ದಾರೆ. ಗೃಹಲಕ್ಷ್ಮಿ ಹಣದ ಜೊತೆಗೆ ಸ್ಕಾಲರ್ ಶಿಪ್ ಹಣ ಕೂಡ ಸೇರಿಸಿ ಕಂಪ್ಯೂಟರ್ ಖರೀದಿಸಿದ್ದು ,ಗೃಹಲಕ್ಷ್ಮಿ ಹಣದ ಸದ್ಭಳಕೆಯಿಂದ ಇತರೆ ಪೋಷಕರಿಗೆ ಪ್ರೇರಣೆಯಾಗಿದ್ಧಾರೆ.