ಬೆಂಗಳೂರು:- ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಈ ಪೈಕಿ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದಾಗಿದ್ದು, ಇದರಡಿಯಲ್ಲಿ ಪ್ರತಿ ಮನೆ ಯಜಮಾನಿ ಖಾತೆಗೆ ಪ್ರತಿ ತಿಂಗಳು 2,000 ರೂಪಾಯಿ ಹಾಕಲಾಗುತ್ತದೆ.
ಆದರೆ ಮೂರ್ನಾಲ್ಕು ತಿಂಗಳಿಂದ ಗೃಹಲಕ್ಷ್ಮೀ’ ಹಣದ ಬರದ ಹಿನ್ನೆಲೆ ಮಹಿಳೆಯರು ಕಂಗಾಲಾಗಿದ್ದಾರೆ. ಇದೀಗ ಮತ್ತೆ ಇಡೀ ರಾಜ್ಯದ ಮಹಿಳೆಯರು ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ.
ಕಳೆದ 3 ತಿಂಗಳಿನಿಂದ ಗೃಹಲಕ್ಷ್ಮಿ ಹಣ ಬಂದ್ ಆಗಿದೆ. 2,000 ರೂಪಾಯಿ ಹಣ ಬಾರದೆ ಇರೋ ಕಾರಣ ನಾರಿಯರು ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ. 3 ತಿಂಗಳಿಂದ ಬ್ಯಾಂಕ್ಗೆ ಅಲೆದರೂ ಹಣ ಮಾತ್ರ ಜಮೆಯಾಗಿಲ್ಲ. ಹಣಬಾರದಕ್ಕೆ ಹಲವು ಜಿಲ್ಲೆಯ ಮಹಿಳೆಯರು ಕಣ್ಣೀರು ಹಾಕುತ್ತಿದ್ದಾರೆ. ಮನೆ ಬಾಡಿಗೆ, ಆಸ್ಪತ್ರೆ, ಇತರೆ ಖರ್ಚಿಗಾಗಿ ಬಳಕೆಯಾಗ್ತಿದ್ದ ಹಣ ಈಗ ಬಾರದಿದ್ದಕ್ಕೆ ಮಹಿಳೆಯರು ಕಂಗಾಲಾಗಿದ್ದಾರೆ. ಹೀಗಾಗಿ ರಾಜ್ಯದ ಮಹಿಳೆಯರು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಹಣ ಕೊಡ್ತಿದ್ದೇವೆ ಅಂತ ಸರ್ಕಾರದ ಸಬೂಬು, 3/4 ತಿಂಗಳಾಯ್ತು ಹಣ ಕೈಗೆ ಬರಲೇ ಇಲ್ಲ. ಏನೇನೋ ಆಸೆ.. ಯೋಜನೆ ರೂಪಿಸಿ ಕೊಂಡಿರುತ್ತೇವೆ ಅಂದ್ರು, ಆದರೆ ಇದೀಗ ಹಣವೇ ಬರ್ತಾ ಇಲ್ಲ. ನಮ್ಮ ಸಮಸ್ಯೆ ಯಾರಿಗೆ ಹೇಳೋಣ? ವೋಟ್ ಹಾಕುವಾಗ ಭರವಸೆ ಕೊಡೋ ಸರ್ಕಾರ, ಈಗೇಕೆ ಯೂಟರ್ನ್ ಹೊಡೆಯುತ್ತಿದೆ ಅಂತ ಮಹಿಳೆಯರ ಬೇಸರ ವ್ಯಕ್ತಪಡಿಸಿದ್ದಾರೆ.