ಗದಗ:- ತುಂಗಭದ್ರಾ ನದಿ ಹಸಿರು ಬಣ್ಣಕ್ಕೆ ತಿರುಗಲು ವಿಜಯನಗರ ಶುಗರ್ ಫ್ಯಾಕ್ಟರಿಯೇ ಕಾರಣವೆಂಬ ಬಲವಾದ ಅನುಮಾನ ಕಾಡಿದೆ. ಹೀಗಾಗಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಖಾರ್ಕಾನೆಗೆ ನೋಟಿಸ್ ಕೊಟ್ಟಿದೆ. ಹೀಗಾಗಿ ಕದ್ದುಮುಚ್ಚಿ ತ್ಯಾಜ್ಯ ಬೇಕಾಬಿಟ್ಟಿ ಹರಿಬಿಟ್ಟ ಕಾರ್ಖಾನೆ ಆಡಳಿತ ಮಂಡಳಿಗೆ ಢವಢವ ಶುರುವಾಗಿದೆ. ಅಷ್ಟೇ ಅಲ್ಲ ಕಾರ್ಖಾನೆ ವಿರುದ್ಧ ಸಮರ ಸಾರಲು ಜಿಲ್ಲಾಡಳಿತ ಸನ್ನದ್ಧವಾಗಿದೆ.
ಮಂಗಳೂರು ಮಸಾಜ್ ಪಾರ್ಲರ್ ಮೇಲೆ ದಾಳಿ: ರಾಮಸೇನೆಯ 14 ಕಾರ್ಯಕರ್ತರು ಅರೆಸ್ಟ್!
ಕಳೆದ 20 ದಿನಗಳಿಂದ ಹಸಿರು ಬಣ್ಣಕ್ಕೆ ತಿರುಗಿದ ನದಿ ನೀರು ನೋಡಿ ನದಿ ತೀರದ ಜನ್ರು ಕಂಗಾಲಾಗಿದ್ದಾರೆ. ಹೊಲ, ಗದ್ದೆಗಳು, ಕುಡಿಯವ ನೀರಿನ ಟ್ಯಾಂಕ್, ಪೈಪ್ಗಳಲ್ಲೂ ಹಸಿರು ಬಣ್ಣದ ನೀರು ನೋಡಿ ಜನರು, ಅಧಿಕಾರಿಗಳು ಬೆಚ್ಚಿ ಹೋಗಿದ್ದಾರೆ. ಶುದ್ಧವಾದ ನದಿ ನೀರು ಕಲುಷಿತವಾಗಲು ಸಕ್ಕರೆ ಕಾರ್ಖಾನೆ ತ್ಯಜ್ಯವೇ ಕಾರಣ ಅನ್ನೋ ಬಲವಾದ ಅನುಮಾನ ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆ ಅಧಿಕಾರಿಗಳಿಗೆ ಅನುಮಾನ ಮೂಡಿದೆ.
ವಿಜಯನಗರ ಶುಗರ್ ಪ್ರೈವೆಟ್ ಲಿಮಿಟೆಡ್ನ ಫ್ಯಾಕ್ಟರಿಗೆ ತ್ಯಾಜ್ಯ ನೀರು ಬಿಡುಗಡೆ ಮಾಡದಂತೆ ನಿರ್ಬಂಧ ಹೇರಲಾಗಿದೆ. ಕಾರ್ಖಾನೆ ಅವೈಜ್ಞಾನಿಕವಾಗಿ ತ್ಯಾಜ್ಯ ನೀರು ಬಿಡುತ್ತಿದೆ. ನಾಲಾ, ಹಳ್ಳಕೊಳ್ಳ, ಕರೆಯಲ್ಲಿ ತ್ಯಾಜ್ಯ ಬಿಡದಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ. ಸರ್ಕಾರ ಕಾರ್ಖಾನೆ ವಿರುದ್ಧ ಉಗ್ರ ಅಸ್ತ್ರ ಪ್ರಯೋಗ ಮಾಡಿದೆ. ಹೀಗಾಗಿ ಇದೇ 21/1 ರಂದು ಕಂದಾಯ ಇಲಾಖೆಗೆ ಅಧಿಕಾರಿಗಳ ಮೂಲಕ ನೋಟಿಸ್ ನೀಡಲಾಗಿದೆ. ಸಕ್ಕರೆ ಕಾರ್ಖಾನೆಗೆ ಹೋಗಿ ಪ್ರತಿಯೊಂದು ರೀತಿಯಲ್ಲಿ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.