ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರಾ ಸಿನಿಮಾಗೆ ಅಭಿಮಾನಿಗಳಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.
ಮೊದಲ ದಿನ ಈ ಚಿತ್ರ 19.79 ಕೋಟಿ ರೂಪಾಯಿ ಗಳಿಕೆ ಮಾಡಿತು. ಎರಡನೇ ದಿನ ಈ ಸಿನಿಮಾ 17.35 ಕೋಟಿ ರೂಪಾಯಿ ಬಾಚಿಕೊಂಡಿತು.
ಮೂರನೇ ದಿನ ಈ ಚಿತ್ರ 20.94 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ವಿಷಯವನ್ನ ಕಾಟೇರ ಚಿತ್ರತಂಡವೇ ಅನೌನ್ಸ್ ಮಾಡಿದೆ. ಅಲ್ಲಿಗೆ ಕಾಟೇರ ನಾಲ್ಕು ದಿನದ ಒಟ್ಟು ಕಲೆಕ್ಷನ್ 60 ಕೋಟಿ ದಾಟಿದೆ. ತರುಣ್ ಸುಧೀರ್ ನಿರ್ದೇಶನದ ಕಾಟೇರ ಸಿನಿಮಾವನ್ನ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹುಬ್ಬಳ್ಳಿಯಲ್ಲಿ ನೋಡಿದ್ದಾರೆ. ಅವರ ಜೊತೆ ಶಾಸಕ ಮಹೇಶ್ ಟೆಂಗಿನಕಾಯಿ ಕೂಡ ಸಾಥ್ ನೀಡಿದ್ದಾರೆ. ಕಾಟೇರ ಸಿನಿಮಾದ ಪ್ರಲ್ಹಾದ್ ಜೋಶಿ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಕಾಟೇರ ಬಿಗ್ ಹಿಟ್ ಅಗ್ತಿರೋದಕ್ಕೆ ಮೈನ್ ರೀಸನ್ ಸಿನಿಮಾದ ಸ್ಟೋರಿ. ಉಳುವವನೇ ಭೂ ವಡೆಯ ಕಥೆಗೆ ಲಿಂಗ್ ಕೊಟ್ಟು ಮಾಸ್ ಎಲಿಮೆಂಟ್ಸ್ ಇಟ್ಟು ಸ್ಟೋರಿ ಬರೆದ್ದಾರೆ. ಈ ಕಥೆ 70ರ ದಶಕದಲ್ಲಿ ನಡೆಯುತ್ತೆ. ಹೀಗಾಗಿ ನಟ ದರ್ಶನ್ರನ್ನ ಕಾಟೇರದಲ್ಲಿ ಪ್ರೇಕ್ಷಕ ಮೆಚ್ಚಿಕೊಳ್ಳುತ್ತಿದ್ದಾರೆ..