ಟೀಂ ಇಂಡಿಯಾ ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. 2025ರ ವರ್ಷವನ್ನು ಭಾರತ ಟೆಸ್ಟ್ ಪಂದ್ಯದ ಮೂಲಕ ಆರಂಭಿಸುತ್ತದೆ. ನಂತರ ಚಾಂಪಿಯನ್ಸ್ ಟ್ರೋಫಿ ಮತ್ತು ಏಷ್ಯಾಕಪ್ ಪಂದ್ಯಗಳು ನಡೆಯಲಿವೆ. ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಮತ್ತೆ ODI-T20 ಗಾಗಿ ಆಸ್ಟ್ರೇಲಿಯಾಗೆ ಪ್ರವಾಸ ಬೆಳೆಸಲಿದೆ. ತವರಿನಲ್ಲಿ ವೆಸ್ಟ್ ಇಂಡೀಸ್-ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. 2025ರಲ್ಲಿ ಚಾಂಪಿಯನ್ಸ್ ಟ್ರೋಫಿ ಮತ್ತು ಏಷ್ಯಾಕಪ್ ಹೊರತುಪಡಿಸಿ ಒಟ್ಟು 39 ಪಂದ್ಯಗಳನ್ನು ಟೀಂ ಇಂಡಿಯಾ ಆಡಲಿದೆ. ಇವುಗಳಲ್ಲಿ 18 ಟಿ20 ಅಂತಾರಾಷ್ಟ್ರೀಯ ಪಂದ್ಯಗಳು, ಒಂಬತ್ತು ಟೆಸ್ಟ್ಗಳು ಮತ್ತು 12 ಏಕದಿನ ಪಂದ್ಯಗಳು ಸೇರಿವೆ. ICC, ACC ಈವೆಂಟ್ಗಳನ್ನು ಸೇರಿಸಿದರೆ ಸುಮಾರು 50 ಪಂದ್ಯಗಳನ್ನು ಆಡಲಿದೆ.
ಮೈಸೂರು ಇನ್ಫೋಸಿಸ್ ಆವರಣದಲ್ಲಿ ಚಿರತೆ ಪತ್ತೆ ವಿಚಾರ: ಈಶ್ವರ್ ಖಂಡ್ರೆ ಹೇಳಿದ್ದೇನು?
ಇನ್ನೂ ಟೀಂ ಇಂಡಿಯಾ ಮೆಲ್ಬೋರ್ನ್ ಟೆಸ್ಟ್ನಲ್ಲಿ ಸೋಲುವ ಮೂಲಕ 2024ರ ಕ್ರಿಕೆಟ್ ಜರ್ನಿಯನ್ನು ಮುಗಿಸಿದೆ. 2024 ಭಾರತ ತಂಡಕ್ಕೆ ಸಿಹಿ-ಕಹಿ ಎರಡನ್ನೂ ನೀಡಿದೆ. ಐಸಿಸಿ ಟ್ರೋಫಿಯ ಬರ ಆವರಿಸಿದೆ.
27 ವರ್ಷಗಳಲ್ಲಿ ಮೊದಲ ಬಾರಿಗೆ ಶ್ರೀಲಂಕಾ ವಿರುದ್ಧ ODI ಸರಣಿಯನ್ನು ಕಳೆದುಕೊಂಡಿತು. 12 ವರ್ಷಗಳ ನಂತರ ತವರಿನಲ್ಲಿ ಟೆಸ್ಟ್ ಸರಣಿಯನ್ನು ಸಹ ಕಳೆದುಕೊಂಡಿತು. ಜೂನ್ 2024 ರಲ್ಲಿ ಎರಡನೇ ಬಾರಿಗೆ T20 ವಿಶ್ವಕಪ್ ಟ್ರೋಫಿಯನ್ನು ಗೆದ್ದುಕೊಂಡಿತು. 2025ರಲ್ಲಿ ಭಾರತ ತಂಡಕ್ಕೆ ಹೊಸ ಪವಾಡ ಸೃಷ್ಟಿಸಲು ಹೊಸ ಅವಕಾಶ ಸಿಗಲಿದೆ.
2025ರ ಸಂಪೂರ್ಣ ವೇಳಾಪಟ್ಟಿ
ಜನವರಿ 3 ರಂದು ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಟೆಸ್ಟ್
ಜನವರಿ-ಫೆಬ್ರವರಿ- ಇಂಗ್ಲೆಂಡ್ ತಂಡ ಭಾರತಕ್ಕೆ ಬರಲಿದೆ. ಮೂರು ODI ಮತ್ತು ಐದು T20 ಪಂದ್ಯಗಳನ್ನ ಭಾರತ ಆಡಲಿದೆ.
ಇಂಗ್ಲೆಂಡ್ ವಿರುದ್ಧ ಟಿ-20 ಪಂದ್ಯಗಳು: ಜನವರಿ 22, 25, 28, 31 ಹಾಗೂ ಫೆಬ್ರವರಿ 2 ರಂದು ನಡೆಯಲಿವೆ
ಇಂಗ್ಲೆಂಡ್ ವಿರುದ್ಧ ODI ಪಂದ್ಯಗಳು: ಫೆಬ್ರವರಿ 6, 9, 12 ರಂದು ನಡೆಯಲಿದೆ
ಫೆಬ್ರವರಿ-ಮಾರ್ಚ್ನಲ್ಲಿ ಚಾಂಪಿಯನ್ಸ್ ಟ್ರೋಫಿ
ಇಂಡಿಯಾ vs ಬಾಂಗ್ಲಾದೇಶ (ಫೆಬ್ರವರಿ 20)
ಇಂಡಿಯಾ vs ಪಾಕಿಸ್ತಾನ (ಫೆಬ್ರವರಿ 23)
ಇಂಡಿಯಾ vs ನ್ಯೂಜಿಲೆಂಡ್ (ಮಾರ್ಚ್ 1)
ಜೂನ್ – ಆಗಸ್ಟ್ನಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್
ಜೂನ್ 20 ರಿಂದ 24ವರೆಗೆ ಮೊದಲ ಟೆಸ್ಟ್
ಜುಲೈ 2 ರಿಂದ 6ವರೆಗೆ ಎರಡನೇ ಟೆಸ್ಟ್
ಜುಲೈ 10 ರಿಂದ 14ವರೆಗೆ ಮೂರನೇ ಟೆಸ್ಟ್
ಜುಲೈ 23 ರಿಂದ 27ವರೆಗೆ ನಾಲ್ಕನೇ ಟೆಸ್ಟ್
ಜುಲೈ 31 ರಿಂದ ಆಗಸ್ಟ್ 4 ವರೆಗೆ ಕೊನೆಯ ಟೆಸ್ಟ್
ಆಗಸ್ಟ್ನಲ್ಲಿ ಬಾಂಗ್ಲಾದೇಶ ವಿರುದ್ಧ ಪಂದ್ಯ
ಮೂರು ಏಕದಿನ ಪಂದ್ಯ
ಮೂರು ಟಿ20 ಪಂದ್ಯ ನಡೆಯಲಿದೆ
ಅಕ್ಟೋಬರ್ನಲ್ಲಿ ವೆಸ್ಟ್ ವಿಂಡೀಸ್ ವಿರುದ್ಧ
ಎರಡು ಟೆಸ್ಟ್ ಪಂದ್ಯಗಳು
ಅಕ್ಟೋಬರ್ -ನವೆಂಬರ್ನಲ್ಲಿ ಆಸ್ಟ್ರೇಲಿಯಾ ಪ್ರವಾಸ
ಮೂರು ಏಕದಿನ ಪಂದ್ಯಗಳು
ಐದು ಟಿ20 ಪಂದ್ಯಗಳು