ಕೋಟ್ಯಂತರ ವಾಟ್ಸ್ಆ್ಯಪ್ ಬಳಕೆದಾರರಿಗೆ ಒಳ್ಳೆಯ ಸುದ್ದಿ ಇದೆ. ನಿಮ್ಮ ಅನುಕೂಲಕ್ಕಾಗಿ ಕಂಪನಿಯು ಶೀಘ್ರದಲ್ಲೇ ಅಪ್ಲಿಕೇಶನ್ಗೆ ಹೊಸ ವೈಶಿಷ್ಟ್ಯವನ್ನು ಸೇರಿಸಲಿದೆ. ಈ ಹೊಸ ವೈಶಿಷ್ಟ್ಯದಿಂದ ಅನೇಕ ಬಳಕೆದಾರರಿಗೆ ಬಹಳಷ್ಟು ಪ್ರಯೋಜನವಾಗಲಿದೆ.
ವಾಟ್ಸಾಪ್ ಬಳಕೆದಾರರಿಗೆ ಸಿಕ್ತು ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ಇನ್ಮುಂದೆ ಹಳೆ ಚಾಟ್ ಹುಡುಕೋದು ಸುಲಭವಾಗಲಿದೆ.
ವಾಟ್ಸ್ಆ್ಯಪ್ ಚಾಟ್ ಫಿಲ್ಟರ್ ಮುಂದಿನ ದಿನಗಳಲ್ಲಿ ಪರಿಚಯಿಸಲಿದೆ. ಇದನ್ನು ಗೂಗಲ್ ಪ್ಲೇ ಸ್ಟೋರ್ ಮೂಲಕ ಅಪ್ಡೇಟ್ ಮಾಡಿಕೊಳ್ಳಬಹುದಾಗಿದೆ. ಹೊಸ ವೈಶಿಷ್ಟ್ಯದಿಂದ ಬಳಕೆದಾರರಿಗೆ ನಿರ್ದಿಷ್ಟ ಚಾಟ್ ಮತ್ತು ಸಂಪರ್ಕವನ್ನು ಸುಲಭವಾಗಿ ಸಾಧಿಸಲು ಅನುಮತಿಸುತ್ತದೆ.
ವಾಟ್ಸ್ಆ್ಯಪ್ ಅಭಿವೃದ್ಧಿ ಪಡಿಸುತ್ತಿರುವ ಹೊಸ ಚಾಟ್ ಫಿಲ್ಟರ್ ಹಳೆಯ ಚಾಟ್ಗಳನ್ನು ಹುಡುಕುವ ಪ್ರಕ್ರಿಯೆಯನ್ನು ಏಕರೂಪವಾಗಿ ವಿನ್ಯಾಸಗೊಳಿಸಿದೆ ಎಂದು ಹೇಳಲಾಗುತ್ತಿದೆ. ಬಳಕೆದಾರರು ತಮಗೆ ಬೇಕೆನಿಸಿದ ಹಳೆಯ ಚಾಟ್ಗಳನ್ನು ನೋಡಲು ಕಸ್ಟಮ್ ಫಿಲ್ಟರ್ ಮಾಡಬಹುದಾಗಿದೆ.
ವಾಟ್ಸ್ಆ್ಯಪ್ ಬಳಕೆದಾರರ ಅನುಭವವನ್ನು ಸುಧಾರಿಸುವ ಉದ್ದೇಶದಿಂದ ಹೊಸ ಹೊಸ ಫೀಚರ್ ಪರಿಚಯಿಸುತ್ತಿರುತ್ತದೆ. ಇತ್ತೀಚೆಗೆ ವಾಟ್ಸ್ಆ್ಯಪ್ ಮೆಟಾ AIಗಾಗಿ ಧ್ವನಿ ಚಾಟ್ ವೈಶಿಷ್ಟ್ಯವನ್ನು ಪ್ರಾರಂಭಿಸಿದೆ. ಇದರ ಮೂಲಕ ಹೊಸ ಚಾಟ್ ಥೀಮ್, ಸುಧಾರಿತ ವಿಡಿಯೋ ಕರೆ, ಅಪರಿಚಿತ ಸಂಪರ್ಕ ನಿರ್ಬಂಧನೆ ಮತ್ತು ಹೊಸ ಭದ್ರತಾ ನವೀಕರಗಳನ್ನು ಒಳಗೊಂಡಿವೆ