ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಹಾಗೂ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಅಗತ್ಯ ಇರುವ ಈ ಕೆಳಗಿನ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ನಿಗದಿತ ನಮೂನೆಯಲ್ಲಿ ಅನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಒಟ್ಟು 2975 ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್ ಮ್ಯಾನ್ ಹುದ್ದೆಗಳನ್ನು ಭರ್ತಿ (KPTCL Recruitment) ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
PM Awas Yojana: ನೀವು ಕೂಡ ಯೋಜನೆಗೆ ಅರ್ಜಿ ಸಲ್ಲಿಸಿದ್ದೀರಾ: ಸ್ಟೇಟಸ್ ಚೆಕ್ ಮಾಡುವುದು ಹೇಗೆ? ಇಲ್ಲಿದೆ
ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ನೇಮಕಾತಿ ವಿವರ
1. ಕಿರಿಯ ಸ್ಟೇಷನ್ ಪರಿಚಾರಕ: 433 ಹುದ್ದೆ
2. ಕಿರಿಯ ಪವರ್ ಮ್ಯಾನ್: 2542 ಹುದ್ದೆ
ಕವಿಪ್ರನಿನಿ ಮತ್ತು ವಿವಿಧ ವಿದ್ಯುತ್ ಸರಬರಾಜು ಕಂಪನಿಗಳ ಈ ಕೆಳಗಿನ ಯಾವುದಾದರೂ ಒಂದು ಅಧಿಕೃತ ವೆಬ್ಸೈಟ್ ಮುಖಾಂತರ ನಿಗದಿತ ನಮೂನೆಯಲ್ಲಿ ‘ಆನ್ ಲೈನ್’ ಮೂಲಕ ಮಾತ್ರ ಅಭ್ಯರ್ಥಿಗಳು ಅ.21ರಿಂದ ನ.20ರವರೆಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ:
https://kptcl.karnataka.gov.in
https://bescom.karnataka.gov.in
https://cescmysore.karnataka.gov.in
https://mescom.karnataka.gov.in
https://hescom.karnataka.gov.in
https://gescom.karnataka.gov.in
ಹುದ್ದೆಗಳ ವರ್ಗೀಕರಣ, ಮೀಸಲಾತಿ ವಿವರ, ಕಲ್ಯಾಣ ಕರ್ನಾಟಕ ಪ್ರದೇಶ ಮೀಸಲಾತಿ, ವಯೋಮಿತಿ, ಅರ್ಹತೆ, ನೇಮಕಾತಿ ವಿಧಾನ, ಪರೀಕ್ಷಾ ವಿಧಾನ, ಅರ್ಜಿಯ ನಮೂನೆ ಮತ್ತು ಇತರೆ ವಿವರಗಳನ್ನು ಒಳಗೊಂಡ ವಿಸ್ತ್ರತ ಉದ್ಯೋಗ ಪ್ರಕಟಣೆಯನ್ನು ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ ಎಂದು ಕೆಪಿಟಿಸಿಎಲ್ ನಿಗಮ ಕಾರ್ಯಾಲಯದ ನಿರ್ದೇಶಕರು ತಿಳಿಸಿದ್ದಾರೆ.
ಅರ್ಜಿ ಸಲ್ಲಿಸಲು ಅರ್ಹತೆ ಮತ್ತು ಅಗತ್ಯ ವಿದ್ಯಾರ್ಹತೆ
ಎಸ್.ಎಸ್.ಎಲ್.ಸಿ. ಅಥವಾ 10ನೇ ತರಗತಿಯ (ಸಿ.ಬಿ.ಎಸ್.ಇ/ಐ.ಸಿ.ಎಸ್.ಇ) ಪರೀಕ್ಷೆಯನ್ನು ಕರ್ನಾಟಕ ರಾಜ್ಯದ ವಿದ್ಯಾಸಂಸ್ಥೆಗಳಿಂದ ತೇರ್ಗಡೆ ಹೊಂದಿರುವಂತಹ ಅಭ್ಯರ್ಥಿಗಳು ಮಾತ್ರ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಅರ್ಹರಾಗಿರುತ್ತಾರೆ.