ಕಲಬುರಗಿ : ಸಿಎಂ ರಾಜಕೀಯ ಸಲಹೆಗಾರ ಹುದ್ದೆಗೆ ಬಿ.ಆರ್.ಪಾಟೀಲ್ ರಾಜೀನಾಮೆ ನೀಡಿದ್ದಾರೆ. ಈ ಕುರಿತು ಕಲಬುರಗಿಯಲ್ಲಿ ಪ್ರತಿಕ್ರಿಯಿಸಿರುವ ಬಿ.ಆರ್.ಪಾಟೀಲ್, ಇದು ವಿಶೇಷ ಬೆಳವಣಿಗೆ ಏನಲ್ಲ , ನಾನು ಯಾವತ್ತೋ ರಾಜಿನಾಮೆ ಕೊಡಬೇಕು ಅಂತಾ ಇದ್ದೆ, ರಾಜ್ಯಪಾಲರ ತೂಗುಕತ್ತಿ ಮೇಲಿತ್ತು. ಹಾಗಾಗಿ ಅದಾದ ಮೇಲೆ ರಾಜೀನಾಮೆ ನೀಡಿದ್ದೇನೆ. ಎಂದಿದ್ದಾರೆ.
ನಮಲ್ಲಿ ಸಮಸ್ಯೆಗಳು ಇದ್ದಾವೆ, ಆದರೆ ಸಮಸ್ಯೆಗಳ ಬಹಿರಂಗ ಪಡಿಸಲ್ಲ. ಸಿಎಂ ಜೊತೆ ಮಾತುಕತೆ ನಡೆಸುತ್ತೇನೆ. ಆದ್ರೆ ರಾಜೀನಾಮೆ ವಾಪಸ್ ಪಡೆಯಲ್ಲ ಎಂದರು. ಅನುದಾನ ಕೂಡ ಸರಿಯಾಗಿ ಬರ್ತಿಲ್ಲ , ಶಾಸಕನಾಗಿ ಅಭಿವೃದ್ದಿ ಕೆಲಸ ಮಾಡೋಕೆ ಆಗ್ತಿಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಹಿಂದೇನೆ ರಾಜೀನಾಮೆ ಕೊಡಬೇಕಿತ್ತು. ಆದ್ರೆ ಹೆದರಿ ರಾಜೀನಾಮೆ ಕೊಟ್ಟಿದ್ದಾರೆ ಎನ್ನುತ್ತಾರೆ ಅಂತ ಕೊಟ್ಟಿರಲಿಲ್ಲ. ಆದ್ರೆ ಮೊನ್ನೆಯಷ್ಟೆ ಆ ಹುದ್ದೆ ಲೀಗಲ್ ಆಯಿತು. ಹೀಗಾಗಿ ರಾಜೀನಾಮೆ ನೀಡಿದ್ದೇನೆ. ಸ್ವಲ್ಪ ಸಮಸ್ಯೆ ಇದೆ ಅದನ್ನ ಸಿಎಂ ಎದುರು ಹೇಳಿಕೊಳ್ಳಿತ್ತೆನೆ. ಯಾವುದೇ ಕಾರಣಕ್ಕೂ ರಾಜೀನಾಮೆ ವಾಪಸ್ ತೆಗೆದುಕೊಳ್ಳಲ್ಲ. ಸಂಸಾರ ಅಂದ ಮೇಲೆ ಸಮಸ್ಯೆ ಇರುತ್ತೆ ಅದನ್ನ ಸಿಎಂ ಹತ್ತಿರ ಎಲ್ಲವನ್ನೂ ಹೇಳಿಕೊಳ್ಳುತ್ತೇನೆ ಎಂದಿದ್ದಾರೆ.