ದಾವಣಗೆರೆ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 24ನೇ ಮಹಾ ಅಧಿವೇಶನವು ದಾವಣಗೆರೆಯ ಬಾಪೂಜಿ ಎಂ.ಬಿ.ಎ ಕಾಲೇಜು ಮೈದಾನದಲ್ಲಿ ಡಿ. 23 ಹಾಗೂ 24ರಂದು ಜರುಗಲಿದೆ. ಜಿಲ್ಲೆಯಿಂದ ಸುಮಾರು ಜನರು ಭಾಗವಹಿಸುವ ನಿರೀಕ್ಷೆ ಇರುವುದರಿಂದ ನಾಳೆಯ ಅಧಿವೇಶಕ್ಕೆ ದಾವಣಗೆರೆಯಲ್ಲಿ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 2 ಲಕ್ಷ ಜನ ಸೇರುವ ನಿರೀಕ್ಷೆಯಾಗಿದ್ದು, ಮೈದಾನದಲ್ಲಿ ಅದ್ಧೂರಿ ವೇದಿಕೆ ನಿರ್ಮಾಣ ಮಾಡಲಾಗಿದೆ. ಸಮಾಜದ ಮುಖಂಡರು ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ನಡೆಸುತ್ತಿದ್ದಾರೆ. ಡಿಸೆಂಬರ್ 23 ಮತ್ತು 24 ಎರಡು ದಿನಗಳ ಕಾಲ ನಡೆಯಲಿರುವ ಮಹಾ ಅಧಿವೇಶನಕ್ಕೆ ಸುತ್ತೂರ ಮಠದ ದೇಶಿಕೇಂದ್ರ ಸ್ವಾಮೀಜಿಗಳಿಂದ ಉದ್ಘಾಟನೆ ಮಾಡಲಾಗುತ್ತದೆ.
ಅಧಿವೇಶನದಲ್ಲಿ ಸಮಾಜದ ವಿವಿಧ ಮಠಗಳ ಸ್ವಾಮೀಜಿಗಳು ಭಾಗಿ ಸಾಧ್ಯತೆಯಿದೆ. ಸಮಾಜದ ರಾಜಕಾರಣಿಗಳು, ಹಿರಿಯ ಮುಖಂಡರು ಹಾಗೂ ಯುವಕರು ಸೇರಿದಂತೆ 2 ಲಕ್ಷಕ್ಕುಅಧಿಕ ಜನರು ಭಾಗಿ ನಿರೀಕ್ಷೆಯಾಗಿದ್ದು, 60 ವರ್ಷಗಳ ಬಳಿಕ ಇದೀಗ ದಾವಣಗೆರೆಯಲ್ಲಿ ನಡೆಯುತ್ತಿರುವ ಲಿಂಗಾಯತ ಮಹಾ ಅಧಿವೇಶನವಾಗಿದೆ.