ಹೊಸಕೋಟೆ- ಒಳ ಮೀಸಲಾತಿಯನ್ನ ಸುಪ್ರಿಂಕೋರ್ಟ್ ರಾಜ್ಯ ಸರ್ಕಾರದ ವ್ಯಾಪ್ತಿಗೆ ತಂದಿದ್ರು ಜಾರಿ ಮಾಡಲು ಸರ್ಕಾರ ಮೀನಾಮೇಷ ಎಣಿಸುತ್ತಿದ್ದು ರಾಜ್ಯ ಕಾಂಗ್ರೇಸ್ ಸರ್ಕಾರ ಮಾದಿಗ ಸಮುದಾಯಕ್ಕೆ ಸುಳ್ಳು ಆಶ್ವಾಸನೆಗಳನ್ನ ಕೊಟ್ಟಿದೆ ಅಂತ ಮಾಜಿ ಕೇಂದ್ರ ಸಚಿವ ನಾರಾಯಣಸ್ವಾಮಿ ಆಕ್ರೋಶ ಹೊರ ಹಾಕಿದ್ದಾರೆ.
ವಾಟ್ಸ್ಆ್ಯಪ್ ಬಳಕೆದಾರರೇ ಗಮನಿಸಿ: ನಿಮಗಿನ್ನೂ ಈ ಟ್ರಿಕ್ ಬಗ್ಗೆ ಗೊತ್ತಿಲ್ವಾ!? ಇಲ್ಲಿ ತಿಳಿಯಿರಿ!
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಬಳಿ ಮಾದ್ಯಮಗೋಷ್ಟಿ ನಡೆಸಿ ಮಾತನಾಡಿದ ಮಾಜಿ ಕೇಂದ್ರ ಸಚಿವ ನಾರಾಯಣಸ್ವಾಮಿ, ಚುನಾವಣೆಗೂ ಮುನ್ನ ಒಳ ಮೀಸಲಾತಿಯನ್ನ ಜಾರಿಗೆ ತರ್ತಿವಿ ಪ್ರಣಾಳಿಕೆಯಲ್ಲಿ ಹಾಕ್ತೀವಿ ಅಂತ ಹೇಳಿದ್ರು. ಜೊತೆಗೆ ಅಧಿಕಾರಕ್ಕೆ ಬಂದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಮಾಡ್ತೀವಿ ಅಂತ ಹೇಳಿದ್ರು ಆದ್ರೆ ಈವರೆಗೂ ಮಾಡಿಲ್ಲ ಅಂತ ಆಕ್ರೋಶ ಹೊರ ಹಾಕಿದ್ದಾರೆ.
ಅಲ್ಲದೆ ಕೆಲ ಮೂರ್ಖ ಮಂತ್ರಿಗಳು ಗೃಹ ಸಚಿವರ ಮನೆಯಲ್ಲಿ ಸಭೆ ಸೇರಿ ದತ್ತಾಂಶ ಬಂದಿಲ್ಲ ಇಂಪೀರಿಕಲ್ ರಿಪೋರ್ಟ್ ಬಂದಿಲ್ಲ ಡೆಟಾ ಇಲ್ಲ ಅಂತ ಮೂರ್ಖ ಮಂತ್ರಿಗಳು ಚರ್ಚೆಯನ್ನ ಮಾಡ್ತಿದ್ದು ಸರ್ಕಾರದ ವಿರುದ್ದ ಶೋಷಿತ ವರ್ಗಕ್ಕೆ ಅನುಮಾನ ಬಂದಿದ್ದು ಇವರ ಮೇಲೆ ವಿಶ್ವಾಸ ಕಳೆದು ಹೋಗಿದೆ.
ರಾಜ್ಯದಲ್ಲಿ ಶೋಷಿತ ವರ್ಗ ದಂಗೆ ಎದ್ದಾಗ ನ್ಯಾಯ ಸಿಗಲಿದ್ದು ಆ ನಿಟ್ಟಿನಲ್ಲಿ ಸಮುದಾಯದ ಮುಖಂಡರು ಮುಂದಾಗಬೇಕು ಅಂತ ಮಾಜಿ ಕೇಂದ್ರ ಸಚಿವ ನಾರಾಯಣಸ್ವಾಮಿ ಹೇಳಿದ್ದಾರೆ.