ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದ ಸರ್ಕಾರಿ ನೌಕರರು ದಿಡೀರ್ ಆಗಿ . 7ನೇ ವೇತನ ಜಾರಿ ಸೇರಿ ಪ್ರಮುಖ ಮೂರು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರ ಸಂಘ ದಿಂದ ಸರ್ಕಾರಕ್ಕೆ ಡೆಡ್ ಲೈನ್ ಕೊಟ್ಟಿದ್ದಾರೆ ಹಾಗೆ ಜುಲೈ 28ರೊಳಗೆ ಬೇಡಿಕೆ ಈಡೇರಿಸದಿದ್ದಲ್ಲಿ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
Prevent Dengue: ಡೆಂಗ್ಯು ತಡೆಗೆ ಟಾಸ್ಕ್ ಫೋರ್ಸ್ ರಚನೆ: ವೈದ್ಯಾಧಿಕಾರಿಗಳಿಗೆ ಸಿಎಂ ಸೂಚನೆ!
ಜುಲೈ 14ರವರೆಗೆ ಜಿಲ್ಲಾಧಿಕಾರಿ,ತಹಶಿಲ್ದಾರ್,ಶಾಸಕರಿಗೆ ಬೇಡಿಕೆಯ ಮನವಿ ಪತ್ರ ಸಲ್ಲಿಕೆ ಮಾಡಲು ತಿರ್ಮಾನಿಸಿದ್ದು ಜುಲೈ ಮೂರನೇ ವಾರದಲ್ಲಿ ಪದಾಧಿಕಾರಿಗಳ ಸಭೆ ಕರೆದು ಹೋರಾಟದ ದಿನಾಂಕ ನಿಗದಿ ಪಡಿಸಲಾಗಿದ್ದು ಜುಲೈ 28ರೊಳಗೆ ಬೇಡಿಕೆ ಈಡೇರಿಸದಿದ್ದಲ್ಲಿ ಜುಲೈ ಕೊನೆಯವಾರದಲ್ಲಿ ಅನಿರ್ಧಿಷ್ಟ ಪ್ರತಿಭಟನೆ ಮಾಡುತ್ತೇವೆ ಹಾಗೆ ಕರ್ತವ್ಯಕ್ಕೆ ಗೈರಾಗಿ ಪ್ರತಿಭಟನೆ ಮಾಡಲು ತಿರ್ಮಾನಿಸಲಾಗಿದೆ.
ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಮುಖ ಬೇಡಿಕೆಗಳು
1 ರಾಜ್ಯ 7ನೇ ವೇತನ ಆಯೋಗದ ವರದಿಯನ್ನ ಯಥಾವತ್ತಾಗಿ ಜಾರಿಗೊಳಿಸುವುದು
2 ಎನ್ಪಿಎಸ್.ರದ್ದು,ಹಳೆ ಪಿಂಚಣಿ ಯೋಜನೆ ಜಾರಿ
3 ಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆ ಅನುಷ್ಠಾನ