ಮೈಸೂರು:- ಸಿದ್ದರಾಮಯ್ಯ ವಿಚಾರದಲ್ಲಿ ರಾಜ್ಯಪಾಲರ ನಿರ್ಧಾರ ಸಂವಿಧಾನ ಬಾಹಿರ ಎಂದು ಕಾಂಗ್ರೆಸ್ ಶಾಸಕ ತನ್ವೀರ್ ಸೇಟ್ ಹೇಳಿದ್ದಾರೆ.
ಜನ – ವನ ಕಾರ್ಯಕ್ರಮ: ವಿದ್ಯಾರ್ಥಿಗಳಿಗೆ ವನ್ಯಜೀವಿಗಳನ್ನ ಸಂರಕ್ಷಣೆ ಮಾಡುವ ಬಗ್ಗೆ ಅರಿವು!
ಈ ಸಂಬಂಧ ಮಾತನಾಡಿದ ಅವರು, ಅಸಲಿಗೆ ರಾಜ್ಯಪಾಲರು ತೆಗೆದುಕೊಂಡಿರುವ ಕ್ರಮವೇ ಕಾನೂನು ಮತ್ತು ಸಂವಿಧಾನಬಾಹಿರ, ಯಾಕೆಂದರೆ ಸೆಕ್ಷನ್ 17 (ಎ) ಅಡಿಯಲ್ಲಿ ಖಾಸಗಿ ದೂರುಗಳಿಗೆ ರಾಜ್ಯಪಾಲರು ಪ್ರಾಸಿಕ್ಯೂಷನ್ ಅನುಮತಿ ನೀಡಲು ಬರಲ್ಲ, ಲೋಕಾಯುಕ್ತ ಅಥವಾ ಎಸ್ಐಟಿಗಳು ಅನುಮತಿ ಕೋರಿದಾಗ ಮಾತ್ರ ಅವರು ಸ್ಪಂದಿಸಬೇಕು ಎಂದು ಸೇಟ್ ಹೇಳಿದರು.
ಅದಕ್ಕೂ ಮಿಗಿಲಾಗಿ ಮುಖ್ಯಮಂತ್ರಿಯವರ ವಿರುದ್ಧ ಯಾವುದೇ ದಾಖಲೆ ಪುರಾವೆಗಳಿಲ್ಲ, ಪ್ರಕರಣದಲ್ಲಿ ಸಿದ್ದರಾಮಯ್ಯ ಹಸ್ತಕ್ಷೇಪ ಮಾಡಿರುವ ಕುರುಹು ಇಲ್ಲ, ಹೀಗಾಗಿ ಸಂವಿಧಾನಕ್ಕೆ ಧಕ್ಕೆಯಾಗುವ ಹಾಗೆ ರಾಜ್ಯಪಾಲರು ನಡೆದುಕೊಂಡಿದ್ದರೆ ರಾಷ್ಟ್ರಪತಿಯವರ ಮಧ್ಯಪ್ರವೇಶ ಅನಿವಾರ್ಯ ಅಗುತ್ತದೆ ಎಂದು ತನ್ವೀರ್ ಸೇಟ್ ಹೇಳಿಕೆ ನೀಡಿದ್ದಾರೆ.