ತುಮಕೂರು : ತ್ರಿವಿಧ ದಾಸೋಹಿ, ಡಾ. ಶಿವಕುಮಾರ್ ಜೀವನವು ಸೇವಾ ಭಾವ, ಸಮರ್ಪಣೆ ಮತ್ತು ಪರೋಪಕಾರದ ನಿದರ್ಶನವಾಗಿದ್ದು, ಅವರ ಜೀವನ ನಿಜವಾದ ಮಾನವೀಯತೆ ಜಾತಿ, ಧರ್ಮ ಮತ್ತು ಭೌತಿಕತೆಯನ್ನು ಮೀರಿದೆ ಎಂದು ಅವರ ಜೀವನ ನಮಗೆ ಕಲಿಸುತ್ತದೆ. ಅವರ ಕೊಡುಗೆ ಸದಾ ಸ್ಫೂರ್ತಿದಾಯಕವಾಗಿರುತ್ತದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು. ಸಿದ್ದಗಂಗಾ ಮಠದಲ್ಲಿ ಶಿವಕುಮಾರ ಮಹಾಶಿವಯೋಗಿಗಳ 6ನೇ ಪುಣ್ಯ ಸಂಸ್ಮರಣೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿವಕುಮಾರ ಮಹಾಸ್ವಾಮೀಜಿ ಅವರು ಸರಳ ಜೀವನ ಮತ್ತು ಉನ್ನತ ಚಿಂತನೆಯ ತತ್ವವನ್ನು ಅನುಸರಿಸಿ, ಇತರರನ್ನು ಅದೇ ಮಾರ್ಗವನ್ನು ಅನುಸರಿಸಲು ಪ್ರೇರೇಪಿಸಿದರು. ಅವರು ಮಾನವೀಯತೆಯ ನಿಜವಾದ ಸಂಕೇತವಾಗಿದ್ದಾರೆ. ಅವರು ಜಾತಿ ಮತ್ತು ಧರ್ಮವನ್ನು ಮೀರಿ ಸಮಾಜಕ್ಕೆ ಸೇವೆ ಸಲ್ಲಿಸಿದ ಮಹಾನ್ ಜ್ಞಾನಿ. ಅವರಿಗೆ ಅನೇಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿ ದೊರೆತಿದೆ. ಭಾರತ ಸರ್ಕಾರವು ಅವರಿಗೆ 2015ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ ಎಂದರು.
ತುಮಕೂರಿನ ರೈಲ್ವೇ ನಿಲ್ದಾಣಕ್ಕೆ ಶಿವಕುಮಾರ ಶ್ರೀಗಳ ಹೆಸರಿಡಲು ಪ್ರಸ್ತಾವನೆ: ಕೇಂದ್ರ ಸಚಿವ ವಿ.ಸೋಮಣ್ಣ
ನಮ್ಮ ಧರ್ಮದ ಏಕತೆ ಮತ್ತು ಸಮಗ್ರತೆಗೆ ಮತ್ತು ಸನಾತನ ಧರ್ಮದ ಪರಂಪರೆಯನ್ನು ಶ್ರೀಮಂತಗೊಳಿಸಲು ಸಾಧುಗಳು ಮತ್ತು ಸಂತರು ದೊಡ್ಡ ಕೊಡುಗೆ ನೀಡಿದ್ದಾರೆ. ಸಾಧುಗಳು, ಸಂತರು, ಆಚಾರ್ಯರು ಮತ್ತು ಋಷಿಮುನಿಗಳು ವಿಶ್ವ ವೇದಿಕೆಯಲ್ಲಿ ಧರ್ಮ, ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ಧ್ವಜವನ್ನು ಹಾರಿಸಿದ್ದಾರೆ. ಪ್ರಸ್ತುತ ಪ್ರಪಂಚದ ಅನೇಕ ದೇಶಗಳು ಆಧ್ಯಾತ್ಮಿಕ ಮತ್ತು ಮಾನಸಿಕ ಯೋಗಕ್ಷೇಮಕ್ಕಾಗಿ ಭಾರತದ ಕಡೆಗೆ ನೋಡುತ್ತಿವೆ. ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ‘ಮಹಾ ಕುಂಭ’ ಒಂದು ಉದಾಹರಣೆಯಾಗಿದೆ ಎಂದರು.