ಪಶ್ಚಿಮ್ ಬಂಗಾಳ, ತಮಿಳುನಾಡು ಆಯ್ತು ಈಗ ಕರ್ನಾಟಕದಲ್ಲಿ ಗವರ್ನರ್ ವರ್ಸಸ್ ಗವರ್ನಮೆಂಟ್ ಗುದ್ದಾಟ ಶುರುವಾಗಿದೆ. ಅದೆಷ್ಟರ ಮಟ್ಟಿಗೆ ಅಂದ್ರೆ, ಖುದ್ದು ರಾಜ್ಯಪಾಲರ ವಿರುದ್ದವೇ ಸಿಎಂ, ಡಿಸಿಎಂ ಆದಿಯಾಗಿ ಸಚಿವರು ಗುಡುಗುವಂತಾಗಿದೆ. ಈಗಾಗಲೇ ಸರ್ಕಾರಕ್ಕೆ ತಲೆ ನೋವಾಗಿ ಕಾಡುತ್ತಿರುವ ರಾಜ್ಯಪಾಲರು, ಸರ್ಕಾರದ ಇಂಚಿಂಚೂ ನಡೆಯನ್ನು ಪ್ರಶ್ನೆ ಮಾಡುತ್ತಿದ್ದಾರೆ.
ಇದೀಗ ಕರ್ನಾಟಕ ರಾಜ್ಯಪಾಲರು ನಾಲ್ಕು ಪ್ರಮುಖ ವಿಧೇಯಕಗಳಿಗೆ ಅನುಮೋದನೆ ನೀಡಲು ನಿರಾಕರಿಸಿದ್ದಾರೆ. ಹೌದು ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಮಂಡನೆಯಾಗಿದ್ದ ಕರ್ನಾಟಕ ಮಿನರಲ್ಸ್ ಹಕ್ಕು ಮತ್ತು ಬೇರಿಂಗ್ ಲ್ಯಾಂಡ್ ಟ್ಯಾಕ್ಸ್ ಬಿಲ್ 2024, ಕರ್ನಾಟಕ ಹಿಂದೂ ಧಾರ್ಮಿಕಸಂಸ್ಥೆಗಳು ಮತ್ತು ಮುಜರಾಯಿ ವಿಧೇಯಕ 2024,
Post Office Jobs: 10th ಪಾಸಾದವರಿಗೆ ಅಂಚೆ ಇಲಾಖೆಯಲ್ಲಿ ಉದ್ಯೋಗಾವಕಾಶ..! ತಿಂಗಳಿಗೆ ₹ 30,100 ಸಂಬಳ
ಕರ್ನಾಟಕ ಸಹಕಾರಿ ಸೊಸೈಟಿ ಗಳ ತಿದ್ದುಪಡಿ ವಿಧೇಯಕ 2024 ಮತ್ತು ಗದಗ-ಬೆಟಗೇರಿ ವ್ಯಾಪಾರ, ಸಂಸ್ಕೃತಿ ಮತ್ತು ವಸ್ತು ಪ್ರದರ್ಶನ ಪ್ರಾಧಿಕಾರ ವಿಧೇಯಕ 2024 ಅಂಗೀಕಾರವಾಗಿತ್ತು. ಅನುಮೋದನೆಗಾಗಿ ರಾಜ್ಯಪಾಲರ ಕಚೇರಿಗೆ ಕಳುಹಿಸಲಾಗಿತ್ತು. ಆದರೆ, ವಿಧೇಯಕದ ಬಗ್ಗೆ ಸ್ಪಷ್ಟನೆ ಕೋರಿ ರಾಜ್ಯಪಾಲರು ರಾಜ್ಯ ಸರ್ಕಾರಕ್ಕೆ ವಾಪಸ್ಸು ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.