ಬೆಂಗಳೂರು:-ಆಹಾರ ಧಾನ್ಯ, ತರಕಾರಿ, ದಿನ ಬಳಕೆಯ ವಸ್ತುಗಳ ದರ ಏರಿಕೆಯ ಭಾರದಿಂದ ಜನ ತತ್ತರಿಸುತ್ತಿರುವ ಮಧ್ಯೆಯೇ, ಚಾಲ್ತಿಯಲ್ಲಿರುವ ಬಸ್ ಪ್ರಯಾಣ ದರವನ್ನು ಶೇ 15ರಷ್ಟು ಹೆಚ್ಚಿ ಸಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ
ಎಲ್ಲಾ ಫ್ರೀ ಎಂದು ಹೇಳುತ್ತಿದ್ದ ಸರ್ಕಾರ ಇದೀಗ ಬಸ್ ಟಿಕೆಟ್ ದರ ಏರಿಕೆ ಮಾಡಲು ಮುಂದಾಗಿದ್ದು ಸಾರ್ವಜನಿಕರು ಕಂಗಾಲಾಗಿದ್ದಾರೆ.
ಹೊಸ ಹರ್ಷ ಅಂದ್ಕೊಂಡಿದ್ದ ಜನರಿಗೆ ಸರ್ಕಾರ ಮೊದಲ ಶಾಕ್ ಕೊಡಲು ಸಜ್ಜಾಗಿದೆ. ಎಲ್ಲಾ ಫ್ರೀ.. ಫ್ರೀ.. ಫ್ರೀ ಎಂದು ಅಧಿಕಾರಕ್ಕೆ ಬಂದ ಸರ್ಕಾರಕ್ಕೆ ತಮ್ಮ ಗ್ಯಾರಂಟಿಯೇ ಹೊರೆ ಆದಂತೆ ಕಾಣ್ತಿದೆ. ಎಸ್, ಶಕ್ತಿ ಯೋಜನೆಯನ್ನ ಸರಿದೂಗಿಸಲು ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಲು ಸರ್ಕಾರ ಸಜ್ಜಾಗಿದ್ದು, ಹೆಣ್ಮಕ್ಕಳಿಗೆ ಫ್ರೀ ಶಕ್ತಿ ಕೊಡ್ತಿರೋ ಸರ್ಕಾರ ಗಂಡು ಮಕ್ಕಳ ಬಜೆಟ್ಗೆ ಬರೆಹಾಕಲು ನಿರ್ಧರಿಸಿದೆ.
ಪಂಚ ಗ್ಯಾರಂಟಿಗಳ ಕೊಟ್ಟು ಕಾಂಗ್ರೆಸ್ ಸರ್ಕಾರ ಕೈ ಸುಟ್ಟುಕೊಂಡಂತೆ ಕಾಣ್ತಿದೆ. ಇದನ್ನ ಸರಿದೂಗಿಸಲು ಹೊಸ ವರ್ಷಕ್ಕೆ ಕಾಲಿಡ್ತಿದ್ದಂತೆ ಮಹತ್ವದ ನಿರ್ಧಾರ ಕೈಗೊಂಡಿದೆ. ಜನರಿಗೆ ಕೊಟ್ಟಂತೆ ಮಾಡಿ ಕಿತ್ತುಕೊಳ್ಳುವ ಪ್ರಯತ್ನಕ್ಕೆ ಕೈ ಹಾಕಿದೆ. ಇವತ್ತಿನ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಸಾರಿಗೆ ಪ್ರಯಾಣ ದರ ಏರಿಕೆಗೆ ಸಮ್ಮತಿ ಸೂಚಿಸಿದ್ದಾರೆ.
ಈ ಬಗ್ಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಶಕ್ತಿ ಯೋಜನೆ ಎಫೆಕ್ಟ್ನಿಂದಾಗಿ ಕರ್ನಾಟಕದ ನಾಲ್ಕು ಸಾರಿಗೆ ಸಂಸ್ಥೆಗಳಿಂದಲೂ ಬಸ್ ಪ್ರಯಾಣದ ದರ ಏರಿಕೆ ಬಗ್ಗೆ ಪ್ರಸ್ತಾಪವಿತ್ತು. ಈ ಸಂಬಂಧ ಇಂದು ಸಿಎಂ ನೇತೃತ್ವದಲ್ಲಿ ಸಚಿವ ಸಂಪುಟ ಸಭೆಯಲ್ಲಿ ಒಮ್ಮತದ ನಿರ್ಧಾರಕ್ಕೆ ಬಂದು ಬಸ್ ಪ್ರಯಾಣ ದರ ಶೇ.15 ರಷ್ಟು ಏರಿಕೆ ಮಾಡಿ ಆದೇಶ ಹೊರಡಿಸಲಾಗಿದೆ. ಬಸ್ ಟಿಕೆಟ್ ದರ ಶೇಕಡಾ 15ರಷ್ಟು ಹೆಚ್ಚಳ ಮಾಡಲಾಗಿದೆ ಎಂದರು.