ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ನಡೆದ ಸಿಲಿಂಡರ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಜನಾ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಚಿಕಿತ್ಸೆ ಫಲಿಸದೆರ ಸಾವನ್ನಪ್ಪಿದ್ದು, ಅತ್ಯಂತ ದುಃಖಕರವಾದಂತಹ ಸಂಗತಿಯಾಗಿದ್ದು, ಸರ್ಕಾರ ವಿಶೇಷವಾಗಿ ಪರಿಗಣಿಸಿ 15 ಲಕ್ಷ ರೂ. ಆದ್ರೂ ಸಹಾಯಧನ ಮಾಡಬೇಕು ಎಂದು ಶಾಸಕ ಮಹೇಶ್ ಟೆಂಗಿನಕಾಯಿ ತಿಳಿಸಿದರು.
ನಗರದಲ್ಲಿ ಕಿಮ್ಸ್ ಗೆ ಭೇಟಿ ನೀಡಿ ಗಾಯಗೊಂಡಿರುವ ಅಯ್ಯಪ್ಪ ಸ್ವಾಮಿ ಮಾಲಾಧಾರಿಯ ಆರೋಗ್ಯ ವಿಚಾರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಘಟನೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದವರು ಕಡು ಬಡುತನದಿಂದ ಬಂದವರಾಗಿದ್ದು, ಹೊಟ್ಟೆಪಾಡಿಗಾಗಿ ದುಡಿದು ಕುಟುಂಬಸ್ಥರನ್ನು ಸಾಕುತ್ತಿದ್ದರು ಆದರೆ ಅವರ ಸ್ಥಿತಿ ಹೀಗಾಗಿದೆ.
ಬೆಳ್ಳಂ ಬೆಳಗ್ಗೆ ಟೀ ಜೊತೆಗೆ ಬಿಸ್ಕತ್ ತಿಂತೀರಾ..? ಹಾಗಾದ್ರೆ ಈ ಅಭ್ಯಾಸ ಈಗ್ಲೇ ಬಿಟ್ಟು ಬಿಡಿ!
ಈಗಾಗಲೇ ಸರ್ಕಾರ ಐದು ಲಕ್ಷ ರೂ. ಘೋಷಣೆ ಮಾಡಿದೆ. ಮೊನ್ನೆ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರೊಂದಿಗೆ ಮಾತನಾಡಿದ್ದೇನೆ. ಇಂತಹ ಘಟನೆಗಳು ಸಂಭವಿಸಿದಾಗ ವಿಶೇಷವಾಗಿ ಪರಿಗಣನೆ ಮಾಡಿ ಕನಿಷ್ಠ ತಲಾ 15 ಲಕ್ಷ ರೂಗಳನ್ನು ಸಹಾಯಧನ ಮಾಡಿದರೆ ಮೃತ ಕುಟುಂಬಸ್ಥರಿಗೆ ಆಧಾರವಾಗುತ್ತದೆ ಎಂದರು.
ನಾಳೆ ಬೆಂಗಳೂರಿಗೆ ನಾನು ತೆರಳಲಿದ್ದು, ಮುಖ್ಯಮಂತ್ರಿಗಳು ಹಾಗೂ ಸಚಿವ ಸಂತೋಷ ಲಾಡ್ ಅವರನ್ನು ಭೇಟಿ ಮಾಡಿ ಚರ್ಚೆ ಮಾಡುತ್ತೇನೆ ಹಾಗೂ ಕೇಂದ್ರ ಸಚಿವರೊಂದಿಗೆ ಮಾತನಾಡುತ್ತೇನೆಂದರು. ಇನ್ನೂ ಕೇಂದ್ರದಿಂದ ಏನಾದರೂ ವಿಶೇಷ ಪರಿಹಾರ ಬರತ್ತೋ ಏನು ಎಂಬುದರ ಬಗ್ಗೆ ತಿಳಿದು ಪರಿಹಾರ ಕೊಡಿಸುವ ಪ್ರಯತ್ನ ಮಾಡಲಾಗುವುದು ಎಂದರು.