ಒಂದು ಕಡೆ ಸರ್ಕಾರಿ ಸ್ವಾಮ್ಯದ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ಬಲಾಡ್ಯರು..ಮತ್ತೊಂದೆಡೆ ಕಣ್ಮುಚ್ಚಿ ಕುಳಿತ ಅಧಿಕಾರಿಗಳು, ಕಂಡು ಕಾಣದ ರೀತಿಯಲ್ಲಿ ಇರುವ ದಪ್ಪ ಚರ್ಮದ ಅಧಿಕಾರಿಗಳು ಎಲ್ಲಾ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಕರ್ಪೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿದರಗೆರೆ ಕೆರೆಯಲ್ಲಿ.. ಹೌದು ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಕರ್ಪೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿದರಗೆರೆ ಸರ್ವೇ ನಂಬರ್ 79 ರಲ್ಲಿ 60 ಎಕರೆ ಕೆರೆ ಜಾಗವಿದ್ದು,
ಸುಮಾರು 7 ಎಕರೆ 21ಗುಂಟೆ ಜಾಗವನ್ನು ಅಕ್ಕ ಪಕ್ಕದ ಜಮೀನಿನ ಮಾಲೀಕರು ಒತ್ತುವರಿ ಮಾಡಿ ಸರ್ಕಾರಕ್ಕೆ ಮಣ್ಣೆರಿಸುವ ಕೆಲಸ ಮಾಡಿದ್ದಾರೆ.. ಅಧಿಕಾರಿಗಳು ಮಾತ್ರ ಕಂಡು ಕಾಣದ ರೀತಿಯಲ್ಲಿ ವರ್ತನೆ ಮಾಡುತ್ತಿದ್ದಾರೆ. ಇನ್ನು ಸರ್ಕಾರಿ ಅಧಿಕಾರಿಗಳೇ ಪ್ರಬಲ ಮತ್ತು ಬಲಾಡ್ಯರ ಪರವಾಗಿ ಕೆಲಸ ಮಾಡುತ್ತಿದ್ದೀರಾ ಅನ್ನುವ ಅನುಮಾನ ಕಾಡ್ತಿದೆ ಅಲ್ಲದೆ ಸರ್ಕಾರಿ ಹಣವನ್ನು ಪಡೆದು ಸರ್ಕಾರಕ್ಕೆ ವಂಚನೆ ಮಾಡುತ್ತಿದ್ದಾರೆ ..
Long Pepper: ಹಿಪ್ಪಲಿಯ ಔಷಧೀಯ ಗುಣಗಳ ಬಗ್ಗೆ ನಿಮಗೆ ಗೊತ್ತಾದ್ರೆ ಶಾಕ್ ಆಗೋದು ಗ್ಯಾರಂಟಿ.!?
ಇನ್ನು ಕೆರೆಯ ಸಂರಕ್ಷಣೆ ಮಾಡಲು ರೆವಿನ್ಯೂ ಇನ್ಸ್ ಪೆಕ್ಟರ್ ವಿಲೇಜ್ ಅಕೌಂಟ್ ತಹಸೀಲ್ದಾರ್ ಏನ್ ಮಾಡ್ತಿದ್ದಾರೆ ಅಂತ ಗ್ರಾಮಸ್ಥರು ಪ್ರಶ್ನೆ ಮಾಡುತ್ತಿದ್ದಾರೆ ಈ ಪ್ರಕರಣ ಸಂಬಂಧ ಕೆರೆ ಸಂರಕ್ಷಣಾ ಸಮಿತಿ ಕುದ್ದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಏನಾದ್ರೂ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಜರುಗಿಸಲಿ ಅನ್ನೋದೇ ನಮ್ಮ ಆಶಯ.