ಬೆಂಗಳೂರು:- ರಾಜ್ಯ ಸರ್ಕಾರವು
67 ಐಎಎಸ್, ಐಪಿಎಸ್ ಅಧಿಕಾರಿಗಳಿಗೆ ಬಡ್ತಿ ನೀಡಿ ಆದೇಶ ಹೊರಡಿಸಿದೆ. ಆ ಮೂಲಕ ಕರ್ನಾಟಕ ಸರ್ಕಾರ ಆಡಳಿತ ವಿಭಾಗದಲ್ಲಿ ಮೇಜರ್ ಸರ್ಜರಿ ಮಾಡಿದೆ.
ಚಳಿ ಅಂತ ಮುಖ ಮುಚ್ಚಿಕೊಂಡು ಮಲುಗ್ತೀರಾ? ಜೀವಕ್ಕೆ ಕುತ್ತು ಬರಬಹುದು ಜೋಕೆ!
ಇತ್ತೀಚೆಗಷ್ಟೆ ಏಳು ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದ್ದ ಸರ್ಕಾರ ಇದೀಗ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಮತ್ತೆ ಕೆಲ ಐಪಿಎಸ್ ಅಧಿಕಾರಿಗಳಿಗೆ ಮತ್ತು 50 ಎಸ್ಪಿಗಳಿಗೆ ಎಸ್ಪಿಪಿಯಾಗಿ ಬಡ್ತಿ ನೀಡಿ ರಾಜ್ಯ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ.
ಐಪಿಎಸ್ ಅಧಿಕಾರಿಗಳಿಗೆ ಬಡ್ತಿ ನೀಡಿ ವರ್ಗಾವಣೆ:-
ರಮಣ ಗುಪ್ತಾ: ಹೆಚ್ಚುವರಿ ಪೊಲೀಸ್ ಆಯುಕ್ತ, ಗುಪ್ತಚರ ವಿಭಾಗ
ಚೇತನ್ ಸಿಂಗ್ ರಾಥೋಡ್: ಐಜಿಪಿ, ಈಶಾನ್ಯ ವಲಯ (ಬೆಳಗಾವಿ)
ವಿಕಾಸ್ ಕುಮಾರ್: ಹೆಚ್ಚುವರಿ ಪೊಲೀಸ್ ಆಯುಕ್ತ, ಬೆಂಗಳೂರು ಪಶ್ಚಿಮ
ಅಮಿತ್ ಸಿಂಗ್: ಐಜಿಪಿ, ಪಶ್ಚಿಮ ವಲಯ(ಮಂಗಳೂರು)
ವಂಶಿಕೃಷ್ಣ: ಡಿಐಜಿ, ಪೊಲೀಸ್ ನೇಮಕಾತಿ ವಿಭಾಗ, ಬೆಂಗಳೂರು
ಕಾರ್ತಿಕ್ ರೆಡ್ಡಿ: ರಾಮನಗರ ಪೊಲೀಸ್ ವರಿಷ್ಠಾಧಿಕಾರಿಯಾಗಿ ಮುಂದುವರಿಕೆ
ಕುಲದೀಪ್ ಕುಮಾರ್ ಜೈನ್: ಡಿಐಜಿ, ಆಡಳಿತ ವಿಭಾಗದ ಜಂಟಿ ಪೊಲೀಸ್ ಆಯುಕ್ತ
ಸಂತೋಷ್ ಬಾಬು: ಡಿಐಜಿಯಾಗಿ ಬಡ್ತಿ, ಗುಪ್ತಚರ ಇಲಾಖೆ
ಇಶಾ ಪಂತ್: ಡಿಐಜಿಯಾಗಿ ಬಡ್ತಿ, ಗುಪ್ತಚರ ಇಲಾಖೆ
ಜಿ.ಸಂಗೀತಾ: ಡಿಐಜಿ, ಸಿಐಡಿ ಅರಣ್ಯ ಘಟಕ
ಸೀಮಾ ಲಾಟ್ಕರ್: ಡಿಐಜಿ, ಮೈಸೂರು ಕಮಿಷನರ್ ಆಗಿ ಮುಂದುವರಿಕೆ
ರೇಣುಕಾ ಕೆ.ಸುಕುಮಾರ್: ಡಿಐಜಿಯಾಗಿ ಬಡ್ತಿ, ಡಿಸಿಆರ್ಇ, ಬೆಂಗಳೂರು
ಡಾ.ಭೀಮಾಶಂಕರ ಗುಳೇದ್: ಬೆಳಗಾವಿ ಎಸ್ಪಿಯಾಗಿ ಮುಂದುವರಿಕೆ ಮಾಡಲಾಗಿದೆ.
ಎನ್ ಶಶಿ ಕುಮಾರ್: ಪೊಲೀಸ್ ಮಹಾನಿರೀಕ್ಷಕರಾಗಿ ಬಡ್ತಿ, ಹುಬ್ಬಳ್ಳಿ-ಧಾರವಾಡ ನಗರ
ಡಾ.ವೈ.ಎಸ್. ರವಿ ಕುಮಾರ್: ಇನ್ಸ್ಪೆಕ್ಟರ್ ಜನರಲ್ ಆಫ್ ಪೋಲಿಸ್ ಆಗಿ ಬಡ್ತಿ (ಇಂಟಲಿಜೆನ್ಸ್), ಬೆಂಗಳೂರು
50 ಎಸ್ಪಿಗಳಿಗೆ ಎಸ್ಪಿಪಿಯಾಗಿ ಬಡ್ತಿ ಮಾಡಲಾಗಿದೆ.