ಚಿಕ್ಕೋಡಿ: ಎಸ್ಎಸ್ಎಲ್ಸಿ ಪರೀಕ್ಷಾ ವೇಳಾಪಟ್ಟಿ ನಿಗದಿಯಲ್ಲೂ ಮುಸ್ಲಿಂ ತುಷ್ಟೀಕರಣಕ್ಕೆ ಸರ್ಕಾರ ಮುಂದಾಗಿದೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ. ಮುಸ್ಲಿಮರ ನಮಾಜಿನ ಸಮಯಕ್ಕಾಗಿ ಮಧ್ಯಾಹ್ನ ಪರೀಕ್ಷೆ ಅನುಗುಣವಾಗಿ ಪರೀಕ್ಷೆಯನ್ನು ನಿಗದಿ ಮಾಡಿದೆ. ಸರ್ಕಾರ ಮುಸ್ಲಿಮರ ಓಲೈಕೆ ಮುಂದುವರೆಸಿದೆ.
ಶಿಕ್ಷಣ ಕ್ಷೇತ್ರದಲ್ಲೂ ತುಷ್ಟೀಕರಣ ಮಾಡುತ್ತಿದೆ. ಫೆ.26ರಿಂದ ಮಾ.2ರ ವರೆಗೆ ವೇಳಾಪಟ್ಟಿ ನಿಗದಿ ಮಾಡಲಾಗಿದೆ. ಪ್ರತಿನಿತ್ಯ ಬೆಳಿಗ್ಗೆ 10:30 ರಿಂದ 1:30 ಸಮಯ ನಿಗದಿ ಮಾಡಲಾಗಿದೆ. ಶುಕ್ರವಾರ ಮಾತ್ರ ಮಧ್ಯಾಹ್ನ 2 ಗಂಟೆಗೆ ಪರೀಕ್ಷೆ ಪ್ರಾರಂಭವಾಗುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ.
White Onion: ಬಿಳಿ ಈರುಳ್ಳಿ ತಿನ್ನುವುದರಿಂದ ಸಿಗುವ ಪ್ರಯೋಜನಗಳೇನು ಗೊತ್ತಾ?
ಶುಕ್ರವಾರ ದಿನವೇ ಮಧ್ಯಾಹ್ನ 2 ಗಂಟೆಗೆ ಸಮಯ ನಿಗದಿ ಮಾಡಿದ್ದು ನಮಾಜಿಗೋಸ್ಕರ. ಇದು ಮುಸ್ಲಿಮರ ಒಲೈಕೆಗಾಗಿ, ಕೆಲವೇ ಕೆಲವು ಜನರಿಗಾಗಿ ಲಕ್ಷಾಂತರ ಹಿಂದೂಗಳ ಮೇಲೆ ಸಮಯದ ಹೇರಿಕೆ ತುಷ್ಟೀಕರಣ ನೀತಿ ಸ್ಪಷ್ಟವಾಗಿದೆ. ಸರ್ಕಾರದ ನೀತಿಯನ್ನು ಶ್ರೀರಾಮ ಸೇನೆ ಖಂಡಿಸುತ್ತದೆ ಎಂದಿದ್ದಾರೆ.