ಚಿಕ್ಕೋಡಿ: ಮುಸ್ಲಿಂ, ಕ್ರೈಸ್ತ ಸಮುದಾಯಗಳಿಂದ ಕೇರಳದ ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ಮೇಲೆ ಶೋಷಣೆಯಾಗುತ್ತಿದೆ ಎಂದು ಶ್ರೀರಾಮಸೇನಾ ಅಧ್ಯಕ್ಷ ಪ್ರಮೋದ್ ಮುತಾಲಿಕ್ (Pramod Muthalik) ಆರೋಪಿಸಿದ್ದಾರೆ. ಬೆಳಗಾವಿ (Belagavi) ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಪ್ರವಾಸಿ ಮಂದಿರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ದಕ್ಷಿಣ ಭಾರತದಲ್ಲಿ ತಿರುಪತಿ ತಿಮ್ಮಪ್ಪನಷ್ಟೇ ಪ್ರಖ್ಯಾತಿ ಪಡೆದಿರುವ ಅಯ್ಯಪ್ಪ ದೇವಸ್ಥಾನವು ಇದೆ. ಆರು ರಾಜ್ಯಗಳಿಂದ ಐದು ಕೋಟಿ ಜನರು ಅಲ್ಲಿ ಭೇಟಿ ನೀಡ್ತಾರೆ. ಮೂರು ಸಾವಿರ ಕೋಟಿ ರೂ.ಗಿಂತಲೂ ಆದಾಯ ಜಾಸ್ತಿ ಇದೆ ಎಂದು ತಿಳಿಸಿದ್ದಾರೆ. ಪಾರ್ಕಿಂಗ್ ಒಂದು ಕೋಟಿ ವಾಹನಗಳಾಗುತ್ತವೆ. ಒಂದು ವೆಹಿಕಲ್ಗೆ ನಲವತ್ತು ರೂಪಾಯಿ ತೆಗೆದುಕೊಳ್ತಾರೆ.
Bank Holidays: ಬ್ಯಾಂಕ್ ಗ್ರಾಹಕರೇ ಗಮನಿಸಿ.. 2024ರ ಜನವರಿಯಲ್ಲಿ ಬರೋಬ್ಬರಿ 16 ದಿನ ಬ್ಯಾಂಕ್ ರಜೆ!
ಎಲ್ಲ ಮೂಲಗಳಿಂದ ಮೂರು ಸಾವಿರ ಕೋಟಿಗಿಂತಲೂ ಅಧಿಕವಾಗುತ್ತದೆ. ಕೇರಳದಲ್ಲಿರುವ ಸರ್ಕಾರ ನಾಸ್ತಿಕ ಸರ್ಕಾರ. ದೇವರನ್ನು ನಂಬದಂತಹ ಸರ್ಕಾರ ಐದು ಕೋಟಿ ಭಕ್ತರಿಗೆ ಅನುಕೂಲವಾಗುವಂತಹ ಸೌಕರ್ಯ ಒದಗಿಸಿಕೊಡ್ತಿಲ್ಲ. ಕೇರಳ ಸರ್ಕಾರ ದೇವಸ್ಥಾನದ ಆದಾಯವನ್ನು ತಮ್ಮ ಉಪಯೋಗಕ್ಕೆ ಬಳಸಿಕೊಳ್ಳು ತ್ತಿದ್ದಾರೆ ಎಂದು ಆರೋಪಿಸಿದ್ದಾರೆ.