ಬೆಂಗಳೂರು: ಕೊನೆಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಮಣಿದ ಸರ್ಕಾರ ಅಂಗನವಾಡಿ ಕೇಂದ್ರಲ್ಲಿ LKG , UKG ಆರಂಭಗೊಳ್ಳಲಿದ್ದು ಇಂದು ಮಧ್ಯಾಹ್ನ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.
ದೇಶದಲ್ಲೇ ಮೊದಲ ಬಾರಿ ಅಂಗನವಾಡಿಯಲ್ಲಿ LKG , UKG ಪರಿಚಯ ಮಾಡುತ್ತಿದ್ದು ಬೆಂಗಳೂರಿನ ಪಟ್ಟೇಗಾರ ಪಾಳ್ಯದ ಅಂಗನವಾಡಿ ಕೇಂದ್ರದಲ್ಲಿ ಮೊದಲ ಬಾರಿಗೆ ಆರಂಭಗೊಳ್ಳಲಿದೆ.
KRS ಡ್ಯಾಂ ಬಹುತೇಕ ಭರ್ತಿ: ರಾಜ್ಯದ ಪ್ರಮುಖ ಡ್ಯಾಂಗಳ ನೀರಿನ ಮಟ್ಟ ಎಷ್ಟಿದೆ ಗೊತ್ತಾ?
ಈ ಹಿಂದೆ ಶಿಕ್ಷಣ ಇಲಾಖೆಯಿಂದ ಆರಂಭಿಸಲು ಯೋಜನೆ ಮಾಡಲಾಗಿತ್ತು ಇದಕ್ಕೆ ಅಂಗನವಾಡಿ ಕಾರ್ಯಕರ್ತೆಯರು ಹೋರಾಟ ನಡೆಸಿದ್ರು ಶಿಕ್ಷಣ ಇಲಾಖೆ LKG , UKG ಆರಂಭಿಸಿದರೆ ಅಂಗನವಾಡಿಯಿಂದ ಮಕ್ಕಳು ದೂರವಾಗುತ್ತಾರೆಇದನ್ನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದಲೇ ಆರಂಭಿಸಬೇಕು ಎಂದು ಒತ್ತಾಯಿಸಿದ್ದರು ಕಾರ್ಯಕರ್ತೆಯರ ಒತ್ತಡದ ಹಿನ್ನೆಲೆ ಅಂಗನವಾಡಿಯಲ್ಲೇ LKG , UKG ಆರಂಭ ಮಾಡುತ್ತಿದ್ದಾರೆ.