ತುಮಕೂರು:- ಹೆರಿಗೆ ಮಾಡಿಸಲು 3000 ಲಂಚಕ್ಕೆ ಬೇಡಿಕೆ ಇಟ್ಟಿದ್ದ ವೈದ್ಯ ಡಾ.ಹರಿಪ್ರಸಾದ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ತುರುವೇಕೆರೆಯಲ್ಲಿ ಸರ್ಕಾರಿ ವೈದ್ಯನಾಗಿ ಕಾರ್ಯನಿರ್ವಹಿಸುತ್ತಿದ್ದ 44 ವರ್ಷದ ಡಾ.ಹರಿಪ್ರಸಾದ್ ಅವರು, ಹನುಮಂತಪ್ಪ ಎಂಬುವವರಿಂದ ಲಂಚ ಪಡೆಯುವಾಗ ಬಲೆಗೆ ಬಿದ್ದಿದ್ದಾರೆ.
ಹನುಮಂತಪ್ಪ ತುರುವೇಕೆರೆ ತಾಲ್ಲೂಕಿನ ಪಿಕೆಎಸ್ ಕಾಲೋನಿ ವಾಸಿಯಾಗಿದ್ದ. ತುರುವೇಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಘಟನೆ ಜರುಗಿದೆ. ಲಂಚಕ್ಕೆ ಬೇಡಿಕೆ ಹಿನ್ನೆಲೆ ಹನುಮಂತಪ್ಪ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಹೆರಿಗೆಗೂ ಮುನ್ನ ಹಣ ಪಡೆಯುವಾಗ ಲಾಕ್ ಮಾಡಿದ್ದಾರೆ.
ಇಂದು ಸಂಜೆ 7.30ಕ್ಕೆ ಹಣ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳಿಗೆ ಸರ್ಕಾರಿ ವೈದ್ಯ ಸಿಕ್ಕಿ ಬಿದ್ದಿದ್ದಾರೆ. ತುಮಕೂರು ಲೋಕಾಯುಕ್ತ ಎಸ್ಪಿ ವಲೀಬಾಷಾ ನೇತೃತ್ವದಲ್ಲಿ ದಾಳಿ ನಡೆದಿದ್ದು, ಸಿಬ್ಬಂದಿಗಳಾದ ಸಲೀಂಅಹಮದ್, ಶಿವರುದ್ರಪ್ಪ ನೇತೃತ್ವದಲ್ಲಿ ಕಾರ್ಯಚರಣೆ ನಡೆದಿದೆ.
ತುಮಕೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.