ನವದೆಹಲಿ: ಮಳೆಯಿಂದಾಗಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟ (Air Quality) ಪ್ರಮಾಣ ಸುಧಾರಿಸಿದ್ದು, ಸದ್ಯಕ್ಕೆ ಸಮ-ಬೆಸ (Odd-Even) ಯೋಜನೆ ಜಾರಿ ಮಾಡದಿರಲು ಸರ್ಕಾರ ನಿರ್ಧರಿಸಿದೆ ಎಂದು ಪರಿಸರ ಸಚಿವ ಗೋಪಾಲ್ ರೈ (Gopal Rai) ಹೇಳಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಾಯು ಗುಣಮಟ್ಟ ವೃದ್ದಿಯಾಗಿದೆ ಎಂದರು.
ಈ ಮೊದಲು ನವೆಂಬರ್ 13 ರಿಂದ ಸಮ ಬೆಸ ಜಾರಿಗೆ ತರಲು ನಿರ್ಧರಿಸಲಾಗಿತ್ತು, ಮಳೆಯಿಂದ ಈ ಪ್ರಸ್ತಾಪ ಕೈಬಿಟ್ಟಿದೆ. ದೀಪಾವಳಿಯ (Deepavali) ನಂತರ ಗಾಳಿಯ ಗುಣಮಟ್ಟದ ಪರಿಸ್ಥಿತಿಯನ್ನು ಪರಿಶೀಲಿಸಲಾಗುತ್ತದೆ. ಗಾಳಿಯ ಗುಣಮಟ್ಟ ಮತ್ತೆ ಹದಗೆಟ್ಟರೆ ಬೆಸ-ಸಮ ಯೋಜನೆಗೆ ಜಾರಿಗೆ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಹೇಳಿದರು.
HAL Recruitment: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ʼನಲ್ಲಿದೆ ಉದ್ಯೋಗಾವಕಾಶ..! ಬೆಂಗಳೂರಿನಲ್ಲಿಯೇ ಪೋಸ್ಟಿಂಗ್
ಇದಕ್ಕೂ ಮುನ್ನ ಸೋಮವಾರ, ಸಚಿವರು ಬೆಸ-ಸಮ ಯೋಜನೆಯನ್ನು ನವೆಂಬರ್ 13 ಮತ್ತು ನವೆಂಬರ್ 20ರ ನಡುವೆ ಜಾರಿಗೊಳಿಸಲಾಗುವುದು ಎಂದು ಘೋಷಿಸಿದ್ದರು. ಈ ಯೋಜನೆಯು ಕಾರುಗಳು ತಮ್ಮ ನೋಂದಣಿ ಸಂಖ್ಯೆಗಳ ಬೆಸ ಅಥವಾ ಕೊನೆಯ ಅಂಕಿಗಳ ಆಧಾರದ ಮೇಲೆ ಪರ್ಯಾಯ ದಿನಗಳಲ್ಲಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ.