ಕಲಬುರಗಿ : ಪ್ರಿಯಾಂಕ್ ಖರ್ಗೆ ಸಚಿವರಾದ ಬಳಿಕ ಕಲಬುರಗಿಯಲ್ಲಿ ಗೂಂಡಾಗಿರಿ ಪ್ರವೃತ್ತಿ ಹೆಚ್ಚಾಗಿದೆ ಎಂದು ಕಲಬುರಗಿಯಲ್ಲಿ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಆಂದೋಲಾ ಸಿದ್ದಲಿಂಗ ಸ್ವಾಮೀಜಿ ಕಿಡಿಕಾರಿದರು. ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸ್ಪರ್ಧಿಸಿದ್ದ ಬಿಜೆಪಿ ಮುಖಂಡ ಮಣಿಕಂಠ ರಾಥೋಡ್ ಮೇಲೆ ಖರ್ಗೆ ಬೆಂಬಲಿಗರು ಮಾರಾಣಾಂತಿಕವಾಗಿ ಹಲ್ಲೆ ನಡೆಸಿರುವ ವಿಚಾರ ಸಂಬಂಧ ಕಲಬುರಗಿಯಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದರು.
ಚಿತ್ತಾಪುರದಲ್ಲಿ ಬಹಳಷ್ಟು ಅಕ್ರಮ ನಡೆಯುತ್ತಿದೆ ಅದಕ್ಕೆಲ್ಲ ಸಚಿವ ಪ್ರಿಯಾಂಕ್ ಖರ್ಗೆ ಅವರ ಕುಮ್ಮಕ್ಕಿದೆ. ಕಲಬುರಗಿಯಲ್ಲಿ ದುಷ್ಟಶಕ್ತಿಗಳ ಅಟ್ಟಹಾಸ ಮಿತಿಮೀರಿದೆ. ಪ್ರಜಾಪ್ರಭುತ್ವ ಕಗ್ಗೊಲೆಯಾಗಿ ಗೂಂಡಾ ಪ್ರಭುತ್ವ ಹೆಚ್ಚಾಗಿದೆ. ಅಕ್ರಮ ಮರಳು ಲಾರಿಗಳನ್ನು ಹಿಡಿದು ಪೊಲೀಸ್ ಠಾಣೆಗೆ ಒಪ್ಪಿಸಿದ ಮಣಿಕಂಠ ಮೇಲೆ ರಾಬರಿ ಕೇಸ್ ಹಾಕಿದ್ದಾರೆ, ಆಸ್ಪತ್ರೆ ಶುಚಿತ್ವದ ಬಗ್ಗೆ ಪ್ರಶ್ನೆ ಮಾಡಿದ್ರೆ ಕರ್ತವ್ಯಕ್ಕೆ ಅಡ್ಡಿ ಆಂತಾ ಮಣಿಕಂಠ ಮೇಲೆ ಕೇಸ್ ಹಾಕುತ್ತಾರೆ.
Vishwas Vaidya: ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ಸತೀಶ್ ಜಾರಕಿಹೊಳಿ CM ಆಗುವುದು ಅಷ್ಟೇ ಸತ್ಯ: ಕಾಂಗ್ರೆಸ್ ಶಾಸಕ
ಹಾಗಾದ್ರೆ ಈ ಜಿಲ್ಲೆಯಲ್ಲಿ ಹೋರಾಟನೇ ಮಾಡಬಾರದಾ? ಪ್ರಿಯಾಂಕ ಖರ್ಗೆ ಅವರದ್ದು ಯಾವ ಸಂವಿಧಾನ ಇದೆ? ಇವರ ಅಕ್ರಮ, ಭ್ರಷ್ಟಾಚಾರ, ಅವ್ಯವಸ್ಥೆ ವಿರುದ್ಧ ಪ್ರಶ್ನಿಸಿದರೆ ಕ್ರಿಮಿನಲ್ ಕೇಸ್ ಹಾಕುತ್ತಾರೆ. ಪುಂಡ ರಾಜಕಾರಣಿಗಳಿಂದ ಹಲ್ಲೆ ಮಾಡಿಸುತ್ತಾರೆಂದರೆ ಊಹಿಸಿ ಇವರು ಎಷ್ಟರ ಮಟ್ಟಿಗೆ ಕ್ರಿಮಿನಲ್ಗಳನ್ನು ಪೋಷಿಸುತ್ತಿದ್ದಾರೆ, ಅಕ್ರಮ ನಡೆಸುತ್ತಿದ್ದಾರೆ ಎಂಬುದು ಗೊತ್ತಾಗುತ್ತದೆ. ಮಣಿಕಂಠ ರಾಠೋಡ್ ಮೇಲೆ ಹಲ್ಲೆ ಮಾಡಿರುವ ಆರೋಪಿಗಳನ್ನ ಶೀಘ್ರ ಬಂಧಿಸಬೇಕು. ಇಲ್ಲದಿದ್ರೆ ಕಲಬುರಗಿ ಎಸ್ಪಿ ಕಚೇರಿ ಎದುರು ಬೃಹತ್ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಎಚ್ಚರಿಕೆ ನೀಡಿದರು.