ಸಾಮಾನ್ಯವಾಗಿ ಒಂದು ಕಂಪೆನಿಯಲ್ಲಿ ಕೆಲಸ ಮಾಡುವವರು ಹೆಚ್ಚಾಗಿ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಫೋನ್ ಗಳನ್ನು ಬಳಸುತ್ತಾರೆ. ಅದರ ಜೊತೆಗೆ ಕೈಯಲ್ಲೊಂದು ಲ್ಯಾಪ್ ಟಾಪ್ ಇದ್ದೆ ಇರುತ್ತದೆ. ಆದರೆ ಗೂಗಲ್ ಸಿಇಒ ಸುಂದರ್ ಪಿಚೈ ಎಷ್ಟು ಫೋನ್ ಗಳನ್ನು ಬಳಸುತ್ತಾರೆ ಎಂದು ತಿಳಿದರೆ ಶಾಕ್ ಆಗ್ತೀರಾ.
ಗೂಗಲ್ ಮತ್ತು ಆಲ್ಫಾಬೆಟ್ನ ಸಿಇಒ ಸುಂದರ್ ಪಿಚೈ ಇತ್ತೀಚೆಗೆ ಸಂದರ್ಶನದಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ತಮ್ಮ ಟೆಕ್ ಅಭ್ಯಾಸಗಳ ಬಗ್ಗೆ ಮಾತನಾಡಿದ ಸುಂದರ್ ಪಿಚೈ ವಿವಿಧ ಕಾರಣಗಳಿಗಾಗಿ ಒಂದೇ ಬಾರಿಗೆ 20 ಕ್ಕೂ ಹೆಚ್ಚು ಫೋನ್ಗಳನ್ನು ಬಳಸುವುದಾಗಿ ತಿಳಿಸಿದ್ದಾರೆ.
ಹೆಚ್ಚಿನ ಜನರು ಕೇವಲ ಒಂದು ಮೊಬೈಲ್ ಫೋನ್ ಅನ್ನು ನಿರ್ವಹಿಸಲು ಹೆಣಗಾಡುತ್ತಿರುವ ಸಮಯದಲ್ಲಿ, ಪಿಚೈ ಅವರು ಬಹಿರಂಗಪಡಿಸಿದ ಮಾತು ಬಹಳಷ್ಟು ಮಂದಿಗೆ ತುಂಬಾನೇ ಅದ್ಭುತ ಅಂತ ಅನ್ನಿಸಬಹುದು. ನಿಜವಾಗಿಯೂ ಅವರು ಇಷ್ಟೊಂದು ಫೋನ್ಗಳನ್ನು ಬಳಸುತ್ತಾರಂತೆ, ತನ್ನ ಕೆಲಸದ ಭಾಗವಾಗಿ ಅವರು ಎಲ್ಲಾ ಸಾಧನಗಳಲ್ಲಿ ಗೂಗಲ್ ಉತ್ಪನ್ನಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತವೆ ಎಂದು ಖಚಿತಪಡಿಸಿಕೊಳ್ಳಲು ವಿವಿಧ ಸಾಧನಗಳನ್ನು ಪರೀಕ್ಷಿಸುವ ಅಗತ್ಯವಿದೆಯಂತೆ. ಇತ್ತೀಚಿನ ತಂತ್ರಜ್ಞಾನದೊಂದಿಗೆ ಅಪ್ಡೇಟ್ ಆಗಿರಲು ಮತ್ತು ಗೂಗಲ್ ಹೊಸತನವನ್ನು ಮುಂದುವರಿಸುವುದನ್ನು ಖಚಿತಪಡಿಸಿಕೊಳ್ಳಲು ಅವರು ಎಷ್ಟು ಕಾಳಜಿ ವಹಿಸುತ್ತಾರೆ ಎಂಬುದನ್ನು ಇದು ತೋರಿಸುತ್ತದೆ.
ತಮ್ಮ ಖಾತೆಗಳನ್ನು ಸುರಕ್ಷಿತವಾಗಿರಿಸಿಕೊಳ್ಳುವ ವಿಷಯ ಬಂದಾಗ, ಪಿಚೈ ಅವರು ತಮ್ಮ ಪಾಸ್ವರ್ಡ್ಗಳನ್ನು ಆಗಾಗ್ಗೆ ಬದಲಾಯಿಸುವುದಿಲ್ಲ ಎಂದು ಒಪ್ಪಿಕೊಂಡರು. ಬದಲಿಗೆ, ಅವರು ಹೆಚ್ಚುವರಿ ಭದ್ರತೆಗಾಗಿ ಎರಡು ಅಂಶಗಳ ದೃಢೀಕರಣವನ್ನು ಅವಲಂಬಿಸಿದ್ದಾರೆ. ಅವರು ಆಧುನಿಕ ಭದ್ರತಾ ವಿಧಾನಗಳನ್ನು ನಂಬುತ್ತಾರೆ ಆದರೆ ಬಳಕೆದಾರರು ತಮ್ಮ ಸ್ವಂತ ಸುರಕ್ಷತೆಗೆ ಆನ್ಲೈನ್ನಲ್ಲಿ ಜವಾಬ್ದಾರರಾಗಿರಬೇಕು ಎಂದಿದ್ದಾರೆ.